ಚೈಲ್ಡ್ ಲೈನ್ ಸೇ ದೋಸ್ತಿ ವೀಕ್ ಕಾರ್ಯಕ್ರಮಕ್ಕೆ ಚಾಲನೆ

ಗದಗ 18: ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆಗಳ ಕುರಿತು ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಬುಡಕಟ್ಟು ಹಾಗೂ ಅಲೆಮಾರಿ ಜನಾಂಗಗಳಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಶುಕ್ರವಾರ ನಗರದ ಸಿ.ಡಿ.ಓ. ಜೈನ್ ಶಾಲೆಯಲ್ಲಿ ಮಕ್ಕಳ ಸಹಾಯವಾಣಿ(1098) ಕೇಂದ್ರ, ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ ಮುಂಬೈ ಹಾಗೂ ಸೃಷ್ಠಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಚೈಲ್ಡ್ಲೈನ್ ಸೇ ದೋಸ್ತಿ ವೀಕ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದಶರ್ಿಗಳಾದ ರೇಣುಕಾ ಆರ್. ಕುಲಕಣರ್ಿ ಅವರು ಮಾತನಾಡಿದರು.

ಬಾಲ್ಯ ವಿವಾಹದಿಂದ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಕುರಿತು ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ತಡೆಯಲು ಸಾರ್ವಜನಿಕ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಮಕ್ಕಳಿಗೆ ಯಾವುದೇ ಸಮಸ್ಯೆಗಳಿಗೆ ಕೂಡಲೇ ಮಕ್ಕಳ ಸಹಾಯವಾಣಿ 1098 ಸಂಖ್ಯೆಯಲ್ಲಿ ಕರೆ ಮಾಡಿ ಎಲ್ಲ ಇಲಾಖೆಗಳಿಗಿಂತ ಮೊದಲು ಇವರು ತಮ್ಮ ಸಾಹಾಯಕ್ಕೆ ಬರುತ್ತಾರೆ. ನಮ್ಮ ಕರ್ತವ್ಯಗಳನ್ನು ಮೋದಲು ನಮ್ಮ ಮನೆಯಿಂದ ಪ್ರಾರಂಭ ಮಾಡಬೇಕು. ಮಕ್ಕಳು ಹಕ್ಕುಗಳಲ್ಲಿ ಆರೋಗ್ಯವು ಬರುತ್ತದೆ. ಹೀಗಾಗಿ ಶೈಕ್ಷಣೀಕ ಪ್ರಗತಿ ಯಾವರೀತಿ ನಿಗಾವಹಿಸುತ್ತೆವೋ ಅದೆರೀತಿ ಆರೋಗ್ಯ ಕಡೆ ನಿಗಾವಹಿಸಬೇಕು ತಾಯಿ ಗಭರ್ಿಣಿಯಾಗಿದ್ದ ಸಂದರ್ಭದಲ್ಲಿ ಪೌಷ್ಠಿಕಾಂಶಗಳ ಕೊರತೆ ಹಾಗೂ ರಕ್ತಹೀನತೆಯಂತಹ ತೊಂದರೆಯಿಂದ ಬಳಲುತ್ತಿದ್ದ ಪರಿಣಾಮ ವಿಕಲಚೇತನ ಮಕ್ಕಳ ಜನನವಾಗುತ್ತದೆ. ಮತ್ತು ಮಾದಕ ವಸ್ತುಗಳ ಬಳಕೆ ಮಆಡುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಗಮನ ವಹಿಸಬೇಕು. ಮಕ್ಕಳಿಗೆ ಸಮಸ್ಯೆಗಳಾದ ನಿಮ್ಮ ಗೆಳೆಯ/ ಗೆಳತಿಯಾಗಿ ನಿಮ್ಮೊಂದಿಗೆ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ 1098 ಸದಾ ಇರುತ್ತದೆ ಎಂದು ಕುಲಕಣರ್ಿ ಹೇಳಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕೆ.ಆರ್. ನಾಯ್ಕರ್ ಜಿಲ್ಲಾ ಮಕ್ಕಳ ಸಮಿತಯ ಬಗ್ಗೆ ತಿಳಿಸಿ ಇಂದಿನ ಮಕ್ಕಳೂ ಇಂದಿನ ಪ್ರಜೇಗಳು, ಮಕ್ಕಳ ದೇಶದ ಆಸ್ತಿ ಹಾಗಾಗಿ ಮಕ್ಕಳಿಗೆ ಸಮಸ್ಯೆಗೆ ಒಳಪ್ಪಟ್ಟಾಗ ಹೆದರದೆ ನೇರವಾಗಿ ನಮ್ಮಗೆ ಅಥವಾ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಹೆಸರುಗಳನ್ನು ಗೌಪ್ಯಾವಾಗಿಟ್ಟು ನಿಮಗೆ ನ್ಯಾಯ ಅಥವಾ ಪರಿಹಾರ ಮಾಡಲಿಕ್ಕೆ ಸ್ಪಂದಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಭಾಗವಹಿಸಿದ ಪ್ರದೀಪ ಕೋಣಾ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಮಕ್ಕಳು ಸಹ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಮತ್ತು ದೈಹಿಕ ನಿಂದನೆ ಅಥವಾ ಯಾವುದೇ ಮಾನಸಿಕ ತೋಂದರೆಗೆ ಒಳಗಾಗದೊರಳಗೆ ಈ ಮಕ್ಕಳ ಸಹಾಯವಾಣಿ, ಅಥವಾ ಇಲಾಖೆಗಳ ಸಹಾಯ ಪಡೆದು ಈ ತೋದರೇಗಳಿ ಮುಕ್ತಿ ಹೋದಬಹುದು. ವಿದ್ಯಾಥರ್ಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ದುಶ್ಚಟಗಳಿಗೆ ಬಲಿಯಾಗದೆ ಶ್ರದ್ಧೆಯಿಂದ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.

ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕ್ರಮವನ್ನು ಪ್ರಭಾವತಿ ಬೆಟಗೇರಿ ನಿರೂಪಿಸಿದರು, ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕರು ಎಸ್. ಎನ್. ಮಯೇಕರ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಿ.ಡಿ.ಓ. ಜೈನ್ ಶಾಲೆಯ ಮಕ್ಕಳು, ಹಾಗೂ ಸಿಬ್ಬಂದಿ ವರ್ಗದವರು, ಮಕ್ಕಳ ಸಹಾಯವಾಣಿ ಕೆಂದ್ರದ ಸದಸ್ಯರುಗಳಾದ ರೇಖಾ ಬಂಡಿ, ಗೀತಾ ಪತ್ತಾರ, ಅಶ್ವಿನಿ ಹಿರೇಮಠ, ಶಿವಾನಂದ ಹೊಸಳ್ಳಿ, ಉಮಾ ಬಾಕರ್ಿ, ಸಮಾಜ ಸೇವಕರಾದ ಮದುಕೇಶ್ವರ ಕೋರ್ಪಡೆ, ಆರ್.ಟಿ.ಇ. ಸಂಯೋಚಕರು ರಘು ಪಾಟೀಲ ಇತರರು ಉಪಸ್ಥಿತರಿದ್ದರು.