ಲೋಕದರ್ಶನ ವರದಿ
ಕುಕನೂರ 25: ಮಸಬಹಂಚಿನಾಳ ಗ್ರಾಮಕ್ಕೆ ಹೈದ್ರಬಾದ್ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಡಿ, ಸಿ.ಸಿ ರಸ್ತೆ, ಚರಂಡಿ ನಿಮರ್ಾಣ, ಆರು ಹೆಚ್ಚುವರಿ ಕೊಠಡಿಗಳಿಗೆ ಅನುಧಾನ ಬಿಡುಗಡೆಯಾಗಿದೆ, ಗ್ರಾಮವನ್ನು ಸ್ವಚ್ಚವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಒಂದು ಗ್ರಾಮ ಮಾದರಿ ಗ್ರಾಮವಾಗಬೇಕಾದರೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿ ಬೇಕಾಗುತ್ತೆದೆ ಆದ್ದರಿಂದ ಎಲ್ಲಾ ಕೆಲಸಗಳನ್ನು ಸಾರ್ವಜನಿಕರ ಅತ್ಯಂತ ಮುತವಜರ್ಿವಹಿಸಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.
ಸಮೀಪದ ಮಸಬಹಂಚಿನಾಳ ಗ್ರಾಮದಲ್ಲಿ ಹೈದ್ರಬಾದ ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಡಿಯಲ್ಲಿ ಕೈ ಗೊಂಡ ವಿವಿಧ ಕಾಮಗಾರಿಗಳ ಭೂಮಿಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕನ್ನು ಅಭಿವೃದ್ಧಿಗೊಳಿಸಿದ್ದೆನೆ, ತಾಲೂಕಿನ ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದೆನೆ, ಎಂದು ಹಿಂದಿನ ಜನಪ್ರತಿನಿಧಿಗಳು ಕೇವಲ ಸುಳ್ಳು ಭರವಸೆಗಳನ್ನು ನೀಡಿದರು, ಆದರೆ ಈಗ ಯಾವಬ್ಬ ಅಧಿಕಾರಿ ಹತ್ತಿರವಾಗಲಿ, ಸಂಬಂಧಪಟ್ಟ ಯಾವುದೇ ಕಛೇರಿಯಲ್ಲಾಗಲಿ ತಾಲೂಕಿನ ಕೆರೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಕೇವಲ ಬ್ಯಾನರ್ಗಳಲ್ಲಿ ನೀರು ಹರಿಸಿ, ತಾಲೂಕನ್ನು ಅಭಿವೃದ್ಧಿ ಮಾಡಿದ್ದೆನೆ ಎಂದು ಹೇಳಿಕೊಂಡರೆ ಸಾಲದು, ನಮ್ಮ ಜನರು ಸರಕಾರಕ್ಕೆ ಕಟ್ಟುವ ತೆರಿಗೆ ಹಣ ಅವರಿಗೆ ಸರಿಯಾಗಿ ಉಪಯೋಗ ಆಗಬೇಕು, ಕೇವಲ 2-3 ವರ್ಷಗಳ ಹಿಂದೆ ನಿಮರ್ಾಣಗೊಂಡ ಸಿ.ಸಿ ರಸ್ತೆಯನ್ನೆ ಮತ್ತೆ ಅದರ ಮೇಲೆ ಸಿ.ಸಿ ರಸ್ತೆ ಯನ್ನು ನಿಮರ್ಾಣ ಮಾಡುವಂತಹ ಪರಿಸ್ಥಿತಿ ಬಂದಿದೆ, ಎಂದರೆ ನೀವೇ ತಿಳಿದುಕೊಳ್ಳಿ ಅದರ ಗುಣಮಟ್ಟ ಎಷ್ಟು ಚೆನ್ನಾಗಿತ್ತು ಎಂದರು, ತಾಲೂಕಿನಲ್ಲಿ ಯಾವಂದು ಚರಂಡಿ ವ್ಯವಸ್ತೆಯು ಸರಿಯಾಗಿಲ್ಲ, ಸಣ್ಣ ಸಣ್ಣ ಗ್ರಾಮಕ್ಕೂ ಸರಿಯಾದಂತಹ ರಸ್ತೆಗಳಿಲ್ಲ, ನಾನು ಅಧಿಕಾರಕ್ಕ ಬಂದು ಕೇವಲ ಎಂಟು ತಿಂಗಳಾಯಿತು ಆದರೆ ಈ ಹಿಂದೆ ಇಪ್ಪತ್ತು ಮೂವತ್ತು ವರ್ಷ ಆಡಳಿತ ನಡೆಸಿದವರಿಗೆ ಇದು ಯಾವುದು ಕಾಣಲಿಲ್ಲ ಎಂದು ಮಾಜಿ ಸಚಿವ ರಾಯರೆಡ್ಡಿಯವರಿಗೆ ಪರೋಕ್ಷವಾಗಿ ತೀಳಿಸಿದರು,
ಕೇವಲ ಕಟ್ಟಡಗಳನ್ನು ನಿಮರ್ಾಣ ಮಾಡುವುದು ಮಾತ್ರ ಅಭಿವೃದ್ಧಿ ಅಲ್ಲ್ , ದೇಶದ ಬೆನ್ನಲೆಬು ರೈತನ ಕಷ್ಟವನ್ನು ನಿವಾರಿಸಬೇಕಿದೆ, ಬಿ.ಜೆ.ಪಿ ಸರಕಾರದ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕೃಷ್ಣಾ ಬೀ ಸ್ಕೀಗೆ ಅಡಿಗಲ್ಲು ಹಾಕಿದಾಗ ಇದೇ ರಾಯರೆಡ್ಡಿಯವರು ಅದನ್ನು ಅಡ್ಡಗಲ್ಲು ಎಂದು ವ್ಯಂಗವಾಡಿದ್ದರು ಆದರೆ ಈಗ ಅದೇ ಕೃಷ್ಣಾ ಬೀ ಸ್ಕೀ ಜಾರಿಗೆಗಾಗಿ ನಾವು ಅಷ್ಟು ಕೋಟಿ, ಕೊಟ್ಟಿದ್ದೆವೆ ಇಷ್ಟು ಕೋಟಿ ಕೊಟ್ಟಿದ್ದೆವೆ ಎಂದು ಊರು ಊರುಗಳಲ್ಲಿ ಬ್ಯಾನರ್ ಹಾಕಿಕೊಂಡು ಅದನ್ನು ಯಾರು ನಿಜವಾಗಿ ಜಾರಿಗೆ ಮಾಡಿದ್ದು ಎಂಬದನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು. ಮುಖಂಡರಾದ ನವೀನ ಗುಳಗಣ್ಣವರ, ರತನ್ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ, ವೀರಣ ಹುಬ್ಬಳ್ಳಿ,ಗ್ರಾ, ಅಧ್ಯಕ್ಷೆ ಮಂಜಮ್ಮ ದೊಡ್ಮನಿ, ಶರಣಪ್ಪ ಬಣ್ಣದಬಾವಿ, ಈಶಪ್ಪ ಅಂಗಡಿ,ನಿಂಗಪ್ಪ ಗೊಂಡಿಕಾರ್, ತಾಲೂಕಿನ ಆಡಳಿತ ವರ್ಗದವರು, ಇನ್ನಿತರರು ಇದ್ದರು.