ಲೋಕದರ್ಶನ ವರದಿ
ಕೊಪ್ಪಳ: ಸಿಟಿ ಅಸೊಶಿಯೆಟ್ಸ್ ಗ್ರೂಪ್ ಆಪ್ ಕಂಪನಿಸ್ ಹೊಸಪೇಟೆ ವತಿಯಿಂದ ಕೊಪ್ಪಳ ನಗರದ ಪ್ರಮುಖ ಗಂಜ್ ಸರ್ಕಲ್ ಬಳಿ ನಿಲೋಗಲ್ ಕಾಂಪ್ಲೇಕ್ಸ್ನಲ್ಲಿ ವಿನೂತನ ಮಾದರಿಯ ದಿ ರೈಮಂಡ್ಶಾಪ್ ಶೋ ಮಾಟರ್್ ಪ್ರಾರಂಭೋತ್ಸವಕ್ಕೆ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ರಿಬ್ಬನ್ ಕಟ್ಟ ಮಾಡುವುದರ ಮೂಲಕ ಚಾಲನೆ ನೀಡಿದರು.
ಯೂಸುಫಿಯಾ ಮಸ್ಜೀದ್ನ ಖತೀಬ್-ವ ಇಮಾಮ್ ಮುಫ್ತಿ ಮಹಮ್ಮದ್ ನಜೀರ ಅಹ್ಮದ್ ಖಾದ್ರಿ-ವ ತಸ್ಕೀನಿರವರು ಪ್ರಾರಂಭೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿ ಶುಭ ಕೋರಿದರು. ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಜಂಟಿಯಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ನಂತರ ಅವರೆಲ್ಲರಿಗೆ ಕಂಪನಿಸ್ ಪರವಾಗಿ ಸನ್ಮಾನಿಸಲಾಯಿತು.
ವಿಶೇಷ ಆಮಂತ್ರಿತರಾಗಿ ಮಾಜಿ. ಶಾಸಕ ಕೆ. ಬಸವರಾಜ ಹಿಟ್ನಾಳ, ನಗರಸಭೆಯ ಹಿರಿಯ ಸದಸ್ಯ ಹಾಗೂ ಸಮಾಜದ ಮುಖಂಡ ಅಮಜದ್ ಪಟೀಲ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲುಖಾದರ ಖಾದ್ರಿ, ಎಂ. ಪಾಶಾ ಕಾಟನ್, ಜೆಡಿಎಸ್ ಮುಖಂಡರಾದ ಕೆ.ಎಂ. ಸೈಯದ್, ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ, ಮುತ್ತುರಾಜ ಕುಷ್ಟಗಿ, ಕೃಷ್ಣ ಇಟ್ಟಂಗಿ, ರಾಬಿತೇ ಮಿಲ್ಲತ್ನ ಅಧ್ಯಕ್ಷ ಎಂ. ಲಾಯಕ್ ಅಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಸಾಧಿಕ ಅಲಿ, ಯುವ ನಾಯಕ ವಿಜಾರತ್ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಂಪನಿಸ್ನ ಮುಖ್ಯಸ್ಥ ಡಾ.ಸಾಲೇಹಾ ಧಮರ್ಾಯತ್ರವರು ಸಹ ಉಪಸ್ಥಿತರಿದ್ದರು. ಅಲ್ಲದೇ ಪ್ರಾರಂಭೋತ್ಸವ ಕಾರ್ಯಕ್ರಮದ ನಂತರ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬೆಂಗಳೂರು ತಂಡದಿಂದ ರಸಮಂಚರಿ ಕಾರ್ಯಕ್ರಮ ಜರುಗಿತು. ಪ್ರೋಪ್ರೈಟರ್ ಹೊಸಪೇಟೆಯ ಮುಸ್ತಫಾ ಹುಸೈನ್ ಕಂಪ್ಲಿರವರು ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.