10 ಬಿಆರ್ಟಿ ಬಸ್ಸ್ಗಳ ಸಂಚಾರಕ್ಕೆ ಚಾಲನೆ

ಹುಬ್ಬಳ್ಳಿ-ಧಾರವಾಡಗಳ ಮಧ್ಯ ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ಹೆಚ್ಡಿಬಿಆರ್ಟಿಎಸ್ ಯೋಜನೆಯು ಯಶಸ್ವಿಯಾಗಿ ಈಗಾಗಲೇ ಪ್ರಯೋಗಾರ್ಥಕವಾಗಿ 70 ಬಸ್ಸುಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ. ಈ ದಿನ ಮತ್ತೆ 10 ಬಸ್ಸುಗಳನ್ನು ಧಾರವಾಡದ ಬಿಆರ್ಟಿಎಸ್  ಬಸ್ನಿಲ್ದಾಣದಿಂದ(ಮಿತ್ರಸಮಾಜ) ಹುಬ್ಬಳ್ಳಿಯವರೆಗೆ ಪ್ರಾರಂಭಿಸಲಾಗಿದೆ. ಹೀಗೆ  ಒಟ್ಟು 80 ಬಸ್ಸುಗಳು ಹುಬ್ಬಳ್ಳಿ-ಧಾರವಾಡಗಳ ನಡುವೆ ಸಂಚಾರ ಮಾಡುತ್ತವೆ ಎಂದು ಹೆಚ್ಡಿಬಿಆರ್ಟಿಎಸ್ ವ್ಯವಸ್ಥಾಪಕ ನಿದರ್ೇಶಕ ರಾಜೇಂದ್ರ ಚೋಳನ್ ತಿಳಿಸಿದರು. 

ನಗರದಲ್ಲಿ ಶುಕ್ರವಾರ ಧಾರವಾಡದ ಬಿಆರ್ಟಿಎಸ್ ಬಸ್ ನಿಲ್ದಾಣ(ಮಿತ್ರ ಸಮಾಜ)ದಲ್ಲಿ 10 ಬಿಆರ್ಟಿ ಬಸ್ಸುಗಳನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಆರ್ಟಿಎಸ್ ಯೋಜನೆಯನ್ನು ಕನರ್ಾಟಕಕ್ಕೆ ಒಂದು ಮಾದರಿ ಸಾರಿಗೆಯನ್ನು ಮಾಡುವುದು ನಮ್ಮ ಗುರಿಯಾಗಿದೆ. ಜನೇವರಿ-2019 ತಿಂಗಳ ಒಳಗೆ ಒಟ್ಟು 100 ಬಸ್ಸುಗಳ ಕಾಯರ್ಾಚರಣೆಗೆ ತರಲಾಗುವುದು. ಈಗಾಗಲೇ ಒಂದು ಬಸ್ಸಿಗೆ ದಿನಕ್ಕೆ ಸರಾಸರಿ 900 ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವರು. ಈಗಾಗಲೇ ಪ್ರತಿ ಬಸ್ಸಿನ ಅಂತರ 4ರಿಂದ 7 ನಿಮಿಷವಿದ್ದು ಎಲ್ಲಾ ಬಸ್ಸುಗಳನ್ನು ಕಾಯರ್ಾಚರಣೆಗೆ ತಂದರೆ 3ರಿಂದ 5 ನಿಮಿಷ ಅಂತರವನ್ನು ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಉಚ್ಚ ನ್ಯಾಯಾಲಯ ಧಾರವಾಡದವರೆಗೆ ಬಿಆರ್ಟಿಎಸ್ ಬಸ್ಸುಗಳನ್ನು ಬಿಡುವ ಯೋಜನೆಯನ್ನು ಮಾಡಲಾಗಿದೆ. ಈಗಾಗಲೇ ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಲು  35 ನಿಮಿಷವನ್ನು ತೆಗೆದುಕೊಳ್ಳುತ್ತಿದ್ದು ಸಂಪೂರ್ಣವಾಗಿ ಮೂಲಸೌಕರ್ಯಗಳ ಕಾಮಗಾರಿಯು ಮುಕ್ತಾಯವಾದ ಮೇಲೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ 28 ರಿಂದ 30 ನಿಮಿಷ ಸಮಯವನ್ನು ತೆಗೆದುಕೊಳ್ಳುವುದು ಪ್ರಸ್ತುತ 10 ರಿಂದ 15 ನಿಮಿಷದ ಪ್ರಯಾಣದ ಸಮಯವು ಉಳಿತಾಯವಾಗಿದೆ ಎಂದು  ಸುದ್ದಿಗೋಷ್ಟಿಗೆ ತಿಳಿಸಿರುತ್ತಾರೆ. 

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ ಈ ದಿನದಿಂದ ಒಟ್ಟು-80 ಬಸ್ಸುಗಳು ಹುಬ್ಬಳ್ಳಿ-ಧಾರವಾಡಗಳ ಮಧ್ಯ ಸಂಚಾರ ಪ್ರಾರಂಬಿಸಿವೆ. ಅತಿ ಶೀಘ್ರದಲ್ಲಿಯೇ ಉಳಿದ ಬಸ್ಸುಗಳನ್ನು ಪ್ರಾರಂಭಿಸಿ ಒಟ್ಟು-100 ಬಸ್ಸುಗಳು ಹುಬ್ಬಳ್ಳಿ-ಧಾರವಾಡಗಳ ಮಧ್ಯ ಸಂಚರಿಸಲಿವೆ ಎಂದು ಅವರು 10 ಬಿಆರ್ಟಿ ಬಸ್ಸುಗಳಿಗೆ ಹಸಿರು ನಿಷಾನೆ ತೋರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಚಿಗರಿ ಬಸ್ಸುಗಳ ಸಂಚಾರ ಉದ್ಘಾಟನೆಯ ವೇಳೆಯಲ್ಲಿ ವಾ.ಕ.ರ.ಸಾ.ಸಂಸ್ಥೆ ಮತ್ತು ಬಿಆರ್ಟಿಎಸ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾಗಿದ್ದರು. 

ಇದೆ ದಿನ ವಿಶ್ವಬ್ಯಾಂಕ್ ತಂಡದವರು ಅಂತಜರ್ಾಲದ ಮೂಲಕ ಬಿಆರ್ಟಿಎಸ್ ಯೋಜನೆಯ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಬಿಆರ್ಟಿಎಸ್ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುತ್ತಾರೆ ಎಂದು ವ್ಯವಸ್ಥಾಪಕ ನಿದರ್ೇಶಕರು ತಿಳಿಸಿದರು.