ಲೋಕದರ್ಶನ ವರದಿ
ಯಲಬುಗರ್ಾ 08: ನಮ್ಮ ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಒಂದೊಂದು ಕಡೆಗಳಲ್ಲಿ ಒಂದೊಂದು ದರ ಇದ್ದು ಅಧಿಕಾರಿಗಳು ಗಮನ ಹರಿಸಿ ಒಂದೆ ದರ ನಿಗದಿ ಮಾಡಬೇಕು ಎಂದು ತಾಪಂ ಉಪಾದ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ತಾಲೂಕಿನಲ್ಲಿ 81 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವದು ಕಂಡು ಬಂದಿದ್ದು 4 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ವಿವಿಧ 9 ಗ್ರಾಮಗಳಿಗೆ ಬೊರ್ ವೇಲ್ ಕೊರೆಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ತಾಲೂಕಾ ಅಧಿಕಾರಿ ಡಾ, ಮಂಜುನಾಥ ಬ್ಯಾಲಹುಣಸಿ ಮಾತನಾಡಿ ನಮ್ಮ ಇಲಾಖೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮಕ್ಕಳ ಆರೋಗ್ಯ ತಪಾಸಣೆ, ಕುಷ್ಠರೋಗ ತಪಾಸಣೆ, ಮಲೇರಿಯಾ ಸೇರಿದಂತೆ ಹಲವಾರು ರೋಗಗಳು ಹರಡದಂತೆ ಮುನ್ನೇಚ್ಚರಿಕಾ ಕ್ರಮವನ್ನು ವಹಿಸಿ ಜನರಲ್ಲಿ ಸಾಕಷ್ಟು ಜಾಗೃತಿಯನ್ನು ಮೂಡಿಸುತ್ತಿದ್ದೇವೆ, ಸೊಳ್ಳೆ ನಿಯಂತ್ರಣ, ಲಸಿಕೆ ಹಾಗೂ ಜಾತ್ರೆಗಳಲ್ಲಿ ತಿಂಡಿ ತಿನಿಸುಗಳ ಬಗ್ಗೆ ಪರಿಶಿಲನೆ ಮಾಡಲಾಗುತ್ತಿದೆ ಎಂದರು.
ಕಲ್ಲಭಾವಿ ಕೆರೆಗೆ ತಾಪಂ ಆಡಳಿತದಿಂದ ಒಂದು ಲಕ್ಷ ಹಾಗೂ ಪಂಚಾಯತ ರಾಜ್ ಇಂಜನೀಯರಿಂಗ್ ಉಪ ವಿಭಾಗದಿಂದ ಒಂದು ಲಕ್ಷ ರೂ ದೆಣಿಗೆ ನೀಡಲು ಸಭೆಯಲ್ಲಿ ತಿಮರ್ಾನಿಸಲಾಯಿತು. ತಾಲೂಕಿನಲ್ಲಿ ಬಿಕರ ಬರಗಾಲವಿದ್ದರೂ ಜನತೆ ಗುಳೆ ಹೊಗುವದನ್ನ ತಡೆಗಟ್ಟಲು ಹಾಗೂ ಯುವಕರಿಗೆ ಉದ್ಯೋಗ ನೀಡುವದಾಗಲಿ ಮತ್ತು ಯಾವುದೇ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಯಾವುದೇ ಗಂಬೀರ ಚಚರ್ೆ ನಡೆಯಲೇ ಇಲ್ಲಾ.ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪಗೌಡ್ರ, ಸ್ಥಾಯಿ ಸಮಿತಿ ಅದ್ಯಕ್ಷ ರುದ್ರಪ್ಪ ಮರಕಟ್, ಇಓ ಕೆ ತಿಮ್ಮಪ್ಪ, ತಾಪಂ ಸದಸ್ಯರಾದ ಶರಣಪ್ಪ ಈಳಗೇರ, ಶಿವು ಆದಾಪೂರ, ಷಣ್ಮುಖಪ್ಪ ಬಳ್ಳಾರಿ, ಜಗನ್ನಾಥ ಪಾಟೀಲ, ಕೆಂಚವ್ವ ಭಾವಿಕಟ್ಟಿ, ಶಂಕರಗೌಡ್ರ ಟಣಕನಕಲ್, ಕವಿತಾ ಉಳ್ಳಾಗಡ್ಡಿ, ಸೇರಿದಂತೆ ಎಲ್ಲಾ ತಾಪಂ ಸದಸ್ಯರು ಅಧಿಕಾರಿಗಳು ಹಾಜರಿದ್ದರು.