ಲೋಕದರ್ಶನ ವರದಿ
ಯಲಬುಗರ್ಾ 27: ಕೆಂಪು ಕೆರೆಯ ಪಕ್ಕದಲ್ಲಿರುವ ಬೋರವೇಲ್ ಮುಖಾಂತರ ಪಟ್ಟಣದ ಎಲ್ಲಾ ವಾಡರ್ುಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ ಆದರೆ ನೀರು ಸಾರ್ವಜನಿಕರಿಗೆ ತಲುಪುವ ಮೊದಲೇ ಕೆಂಪು ಕೆರೆಯಹತ್ತಿರ ಪೈಪುಲೈನ್ ಒಡೆದು ನೀರು ರಬಸವಾಗಿ ಹರಿದು ಹಾಳಾಗಿಹೊಗುತ್ತಿದೆ ಎಂದು ರಾಜ್ಯ ಜನಕಲ್ಯಾಣ ವೇದಿಕೆ ಕಾರ್ಯದಶರ್ಿ ಶರಣ ಬಸಪ್ಪ. ಕೆ. ದಾನಕೈ ಅವರು ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ, ಇದರಂತೆ ನಾಲ್ಕೈದು ಕಡೆ ನೀರು ಪೋಲಾಗುತ್ತಿದೆ. ಈ ರೀತಿ ಸಮಸ್ಯೆ ಉಂಟಾಗಿ 8-10 ತಿಂಗಳಗತಿಸಿದರು ಸಂಬಂಧಿಸಿದವರು ಸೂಕ್ತ ಕ್ರಮ ತಗೆದುಕೊಂಡಿಲ್ಲ, ಆಯ್ಕೆಯಾದ ಪಟ್ಟಣ ಪಂಚಾಯಿತ್ ಸದಸ್ಯರನ್ನು ಕೆಳಬೇಕೆಂದರೆ ಅವರಿಗೆ ಪ.ಪಂ.ಒಳಗಡೆ ಹೋಗಿ ಕೆಲಸಮಾಡುವ ಭಾಗ್ಯ ಒದಗಿ ಬಂದಿರುವದಿಲ್ಲ, ಇನ್ನೂ ಮುಂದಾದರು ಪಟ್ಟಣ ಪಂಚಾಯಿತಿ ಅಧಿಕಾರಿಗಳೆ ಆಗಿರಲಿ, ಪ.ಪಂ.ಸದಸ್ಯರಾಗಿರಲಿ ನೀರು ಪೋಲಾಗದಂತೆ ನೋಡಿಕೊಳ್ಳಿರಿ ಎಕೆಂದರೆ ಕುಡಿಯುವ ಒಂದು ಹನಿ ನೀರಿಗೂ ಮಹತ್ವವಿದೆ ಜಾಗೃತಿ ವಹಿಸಬೇಕು ಎಂದು ನಗರ ಜನತೆಯ ಪರವಾಗಿ ಒತ್ತಾಯಿಸಿದ್ದಾರೆ.