ಶುದ್ಧ ನೀರು ಕುಡಿಯಿರಿ ಪ್ಲೋರೋಸಿಸ್ ತಡೆಯಿರಿ: ಮೂಲಿಮನಿ ಕರೆ

ಗದಗ 28: ಶುದ್ಧ ನೀರು ಕುಡಿಯುವದ ಮೂಲಕ ಶಕುಂತಲಾ ರ. ಮೂಲಿಮನಿ ಪ್ಲೋರೋಸಿಸ್ ತಡೆಯಲು ಕರೆ ನೀಡಿದರು. 

ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಉಪಾಧ್ಯಕ್ಷರು ಹಸಿರು ನಿಶಾನೆಯನ್ನು ತೋರಿಸುವದರ ಮೂಲಕ ಉದ್ಘಾಟನೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ಲೋರೋಸಿಸ್ ಘಟಕ, ಮದರ್ ಥೇರೆಸಾ ನಸರ್ಿಂಗ್ ಕಾಲೇಜ, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 28ರಂದು ಪ್ಲೋರೋಸಿಸ್ ಕುರಿತು ಜನಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಿ ಪ್ಲೋರೋಸಿಸ್ನ್ನು ತಡೆಗಟ್ಟಲು ತಿಳಿಸಿದರು. ಹೆಚ್ಚು ಪ್ಲೋರೈಡ್ಯುಕ್ತ ಆಹಾರ ಸೇವನೆ ಮಾಡುವದರಿಂದ ಹೊಟ್ಟೆನೋವು, ಭೇದಿ ಅಜೀರ್ಣವಾಗುವದು ಮತ್ತು ಸ್ನಾಯುಗಳ ದೌರ್ಭಲ್ಯ, ಹೆಚ್ಚು ಬಾಯಾರಿಕೆ, ಪದೇ ಪದೇ ಮೂತ್ರ ಹೋಗುವುದು, ಸುಸ್ತಾಗುವದು ಹಾಗೂ ಇನ್ನು ಮುಂತಾದ ತೊಂದರೆಗಳು ಉಂಟಾಗುತ್ತವೆ. ಇವನ್ನು ನಿಯಂತ್ರಣ ಮಾಡಲು ಶುದ್ಧನೀರು, ಪೌಷ್ಠಿಕಾಂಶಯುಕ್ತ ಆಹಾರಗಳಾದ ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೆಕಾಯಿ "ಸಿ" ಅನ್ನಾಂಗ ಜಾಸ್ತಿ ಇರುವ ಸೇಬೆ, ನೆಲ್ಲಿಕಾಯಿ, ನಿಂಬೆ, ಟೋಮೆಟೊ, ಕ್ಯಾರೇಟ್, ಕಿತ್ತಳೆ ಹಾಗೂ ಇತರೆ ಪದಾರ್ಥಗಳಾದ ಬೆಳ್ಳೋಳ್ಳಿ, ಶುಂಠಿ, ಗೆಣಸು ಹೆಚ್ಚು ಹೆಚ್ಚು ಸೇವೆಸುವದರಿಂದ ಪ್ಲೋರೋಸಿಸ್ನ್ನು ನಿಯಂತ್ರಣ ಮಾಡಬಹುದು.

ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಶಿವಕುಮಾರ ಎಸ್. ನೀಲಗುಂದ, ಶ್ರೀ ಮಂಜುನಾಥ ಚವ್ಹಾಣ ಮುಖ್ಯ ಕಾರ್ಯನಿವರ್ಾಕ ಜಿಲ್ಲಾ ಪಂಚಾಯತ, ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ವಿರುಪಾಕ್ಷರಡ್ಡಿ, ಆರ್.ಸಿ.ಎಚ್. ಅಧಿಕಾರಿಗಳಾದ ಡಾ. ಎಸ್. ಎಮ್. ಹೊನಕೇರಿ ಮಲೇರಿಯಾ ಅಧಿಕಾರಿಗಳಾದ ಡಾ. ಅರುಂಧತಿ ಕೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಎಚ್. ಇವರು ಎಲ್ಲ ಅತಿಥಿ ಮಹೋದಯರನ್ನು ಸ್ವಾಗತಿಸಿದರು. ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕರಾದ ಶ್ರೀ ಬಸವರಾಜ ಲಾಳಗಟ್ಟಿ, ಜಿಲ್ಲಾ ಪ್ಲೋರೋಸಿಸ್ ಸಮಾಲೋಚಕರಾದ ಡಾ. ಆರ್. ಆರ್. ಹೊಸಮನಿ, ಜಿಲ್ಲಾ ಪ್ಲೋರೋಸಿಸ್ ಪ್ರಯೋಗಶಾಲಾ ತಂತ್ರಜ್ಞರಾದ ಎಸ್. ಕೆ. ಚೌಡಣ್ಣವರ ಜಾಥಾ ಕಾರ್ಯಕ್ರಮ ಮುಂದಾಳತ್ವ ವಹಿಸಿದ್ದರು. ಜಾಥಾ ಕಾರ್ಯಕ್ರಮದಲ್ಲಿ ಮದರ್ ಥೇರೆಸಾ ನಸರ್ಿಂಗ್ ಕಾಲೇಜ, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ ವಿದ್ಯಾಥರ್ಿ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.

ಜನಜಾಗೃತಿ ಜಾಥಾ ಕಾರ್ಯಕ್ರಮವು ನಗರದ ಮುನ್ಸಿಪಲ್ ಜೂನಿಯರ್ ಕಾಲೇಜು ಆವರಣದಿಂದ ಪ್ರಾರಂಭವಾಗಿ ಗಾಂಧೀ ಸರ್ಕಲ್ ಮುಖಾಂತರ ಮಹೇಂದ್ರಕರ ಸರ್ಕಲ್, ಟಾಂಗಾಕೂಟ, ಹಳೇ ಬಸ್ ನಿಲ್ದಾಣ, ರೋಟರಿ ಸರ್ಕಲ್ ಮೂಲಕ ಹಳೇ ಜಿಲ್ಲಾ ಆಸ್ಪತ್ರೆಗೆ ಬಂದು ಮುಕ್ತಾಯಗೊಂಡಿತು.