“ಸತ್ತವರ ನೆರಳು” ನಾಟಕಕ್ಕೆ ರಮಾಕಾಂತ ಜೋಶಿ ಅವರಿಂದ ಚಾಲನೆ
ಧಾರವಾಡ 09: ಸೃಜನಾ ರಂಗಮಂದಿರದಲ್ಲಿ ಧಾರವಾಡ ರಂಗಾಯಣವು ಆಯೋಜಿಸಿದ್ದ ಜಡಭರತರ “ಸತ್ತವರ ನೆರಳು” ನಾಟಕಕ್ಕೆ ಮನೋಹರ ಗ್ರಂಥಮಾಲಾ ಅಧ್ಯಕ್ಷರಾದ ರಮಾಕಾಂತ ಜೋಶಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ, ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಸೇರಿದಂತೆ ಇತರರು ಇದ್ದರು. ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ನಾಟಕವನ್ನು ಪ್ರಸ್ತುತ ಪಡಿಸಿದರು.