ನಾಟಕ ಪ್ರದರ್ಶನ ಶ್ರೇಷ್ಠ ಕಾರ್ಯ: ಸಾವಳಗಿ ಶ್ರೀಗಳು

ಲೋಕದರ್ಶನ ವರದಿ

ಬೆಳಗಾವಿ 03:  ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ನಾಟಕ ರೂಪದಲ್ಲಿ ಬಸವರಾಜ ಪಟ್ಟಣಶೆಟ್ಟಿ ಪ್ರದಶರ್ಿಸುತ್ತಿರುವದು ಒಂದು ಶ್ರೇಷ್ಠ ಕಾರ್ಯ ಎಂದು ಸಾವಳಗಿ ಸಿದ್ಧ ಸಂಸ್ಥಾನಮಠದ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ರವಿವಾರ ಚಿಂದೋಡಿ ಲೀಲಾ ರಂಗ ಮಂದಿರದಲ್ಲಿ ಬನ್ನಮ್ಮದೇವಿ ನಾಟ್ಯ ಸಂಘ ಹುಕ್ಕೇರಿ ಇವರಿಂದ ಪ್ರದರ್ಶನಗೊಳ್ಳುತ್ತಿರುವ ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ನಾಟಕವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಇಂದಿನ ದಿನಗಳಲ್ಲಿ ತೌಲನಿಕ ನಾಟಕ, ಹಾಡುಗಳು ಕಡಿಮೆಯಾಗುತ್ತಿವೆ. ಮನುಷ್ಯನಿಗೆ ವೇಳೆಯೆ ಇಲ್ಲ. ಶಿವಲಿಂಗೇಶ್ವರ ಮಹಿಮೆ ನಾಟಕ ರೂಪದಲ್ಲಿ ಹೊರತರಲು ಜವಾಬ್ದಾರಿಯೂ ಅಷ್ಟೇ ಮುಖ್ಯ. ನಾಟಕ ಯಶಸ್ವಿಯಾದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ನುಡಿದರು.

ಮೌಲ್ಯಯುತ ನಾಟಕಗಳು ಇಂದಿನ ಅಗತ್ಯ ಜಾತಿಗಳು ಬೇರೆಯಾದರೂ ನೀತಿ ಒಂದೇ ಇರತಬೇಕು ಸಾವಳಗಿ ಮಠವು ಜಾತ್ಯಾತೀತ ತಳಹದಿ ಮೇಲೆ ನಿಂತಿದೆ ಎಂದರು.

ಶಿವಾಪೂರದ ಕಾಡಸಿದ್ಧೇಸ್ವರ ಶ್ರೀಗಳು, ಮೇಯರ ಬಸವರಾಜ ಚಿಕ್ಕಲದಿನ್ನಿ, ತಾಪಂ. ಸದಸ್ಯ ಯಲ್ಲಪ್ಪ ಕೋಳೆಕರ ಇವರು ಮಾತನಾಡಿದರು. ಎಸ್ಸಿಎಸ್ಟಿ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಕೋಲಕಾರ, ಶಿಕ್ಷಕ ಬಸವರಾಜ ಸುಣಗಾರ, ಸಂಜು ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಹಟ್ಟಿಗೌಡರ ನಿರೂಪಿಸಿ ವಂದಿಸಿದರು. ಇತರ ಗಣ್ಯಮಾನ್ಯರು ಭಾಗವಹಿಸಿದ್ದರು.