ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಶೃಂಗೇರಿ ವಿಧುಶೇಖರ ಭಾರತೀ ಮಹಾಸ್ವಾಮಿಜಿ ಭೇಟಿ

ಲೋಕದರ್ಶನ ವರದಿ

ಬೆಳಗಾವಿ, 30: ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಜಿ ಅವರು ಭೇಟಿ ನೀಡಿದರು. ಆಸ್ಪತ್ರೆಯ ವೈದ್ಯಕೀಯ ನಿದರ್ೇಶಕರಾದ ಡಾ. ಎಂ ವಿ ಜಾಲಿ ಅವರು ಆಸ್ಪತ್ರೆಯ ಕುರಿತು ವಿವರಿಸಿದರು. ಆಶೀರ್ವದಿಸಿದರು.  

ನಂತರ ಆಶೀರ್ವದಿಸಿದ ಅವರು, ಸತ್ಯ, ಪ್ರೇಮ, ನಿಸ್ವಾರ್ಥ ಸೇವೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕೆಎಲ್ಇ ಸಂಸ್ಥೆ ಈ ಭಾಗದಲ್ಲಿ ಮಾಡಿರುವ ಕಾರ್ಯ ಜಗದಗಲಕ್ಕೂ ವಿಸ್ತರಿಸಿದೆ. ಡಾ. ಪ್ರಭಾಕರ ಕೋರೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಸಂಸ್ಥೆಗೆ ದಾನಿಗಳೇ ಪ್ರೇರಕರು. ವಿದ್ಯಾದಾನ ಮಾಡುವದರ ಮೂಲಕ ಸಮಾಜದಲ್ಲಿನ ಅನಿಷ್ಠತೆಯನ್ನು ಹೋಗಲಾಡಿಸುತ್ತಿದೆ. ಅದರೊಂದಿಗೆ ವೈದ್ಯಕೀಯ ಸೇವೆ ನೀಡುತ್ತಿರುವದು ಈ ಭಾಗದ ಜನರಿಗೆ ಅತ್ಯಂತ ಅನುಕೂಲವಾಗಿದೆ. ಎಂದು ಶ್ಲಾಘಿಸಿದರು. 

ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಆಶೀರ್ವದಿಸಿ ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ಡಾ. ರಾಜಶೇಖರ ಸೋಮನಟ್ಟಿ, ವಿನಯ ಬೆದ್ರೆ, ರಾಜೀವ ಪಲ್ಲೇದ, ರವಿ ಸಂಕೇಶ್ವರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.