ಲೋಕದರ್ಶನ ವರದಿ
ಶಿಗ್ಗಾವಿ03: ಕಲೆ ಕೇವಲ ಸೌಂದರ್ಯ ಪ್ರಜ್ಞೆಯಾಗಿರದೆ ಸಾಮಾಜಿಕ ಚಿಂತನೆಯೂ ಆಗಿದೆ ಎಂದು ಸಮಾಜಕ್ಕೆ ತೋರಿಸಿ ಕೊಟ್ಟಿರುವ ಡಾ.ಟಿ.ಬಿ.ಸೊಲಬಕ್ಕನವರ ಮಹಾನ ಕಲಾವಿದ ಎಂದು ನಿವೃತ್ತ ಪ್ರಾಚಾರ್ಯ ಫಕೀರಪ್ಪ ಬಡ್ಡಿ ಹೇಳಿದರು.
ಗೊಟಗೋಡಿ ಉತ್ಸವ ರಾಕ್ ಗಾರ್ಡನ್ನ ಇಂಟಿಮೇಟ್ ಥೇಟರ್ನಲ್ಲಿ ಹೊಸ ವರ್ಷದ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸ್ನೇಹಿತರ ಸಂತೋಷ ಕೂಟ ಕಾರ್ಯಕ್ರಮ ಜರುಗಿತು.
ನಂತರ ಮಾತನಾಡಿದ ಅವರು ಗೊಟಗೋಡಿಯ ಕನರ್ಾಟಕ ಜಾನಪದ ವಿಶ್ವವಿದ್ಯಾಲಯವು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಸೊಲಬಕ್ಕನವರ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವುದು ನಿಜವಾಗಿಯೂ ರಾಜ್ಯವೇ ಹೆಮ್ಮೆ ಪಡುವಂಥ ವಿಷಯ ಎಂದು ಫಕೀರಪ್ಪ ಬಡ್ಡಿ ನುಡಿದರು.
ನಾನು ಮತ್ತು ಸೊಲಬಕ್ಕನವರ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಸಹಪಾಠಿಗಳಾಗಿದ್ದೇವು ಎಂದ ಅವರು, ನಮ್ಮ ಚಡ್ಡಿ ದೋಸ್ತ್ನನ್ನು ಡಾಕ್ಟರೇಟ್ ಪದವಿ ಪಡೆದುದಕ್ಕಾಗಿ ಗೌರವಿಸುವ ದೃಷ್ಟಿಯಿಂದ ಶಿಗ್ಗಾಂವ ತಾಲೂಕಿನ ಉಳಿದ ಸಹಪಾಠಿಗಳು ಸೇರಿ ಸ್ನೇಹಿತರ ಸಂತೋಷ ಕೂಟವನ್ನು ಹೊಸ ವರ್ಷದ ಮೊದಲ ದಿನ ನಿಗದಿಗೊಳಿಸಿದ್ದೇವು ಎಂದು ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಸಹದೇವ ಕಂಕನವಾಡ ಮಾತನಾಡಿ, ತಮ್ಮ ವಿದ್ಯಾಥರ್ಿ ಜೀವನ ಎಷ್ಟು ಸುಂದರ ಹಾಗೂ ರೋಮಾಂಚನಕಾರಿ ಆಗಿತ್ತು ಎಂಬುದನ್ನು ಸ್ಮರಿಸಿಕೊಂಡರು.
ತನ್ನನ್ನು ಗೌರವಿಸಿ ಸನ್ಮಾನಿಸಿದ ಶಾಲಾ ಸಹಪಾಠಿಗಳಿಗೆ ಡಾ.ಟಿ.ಬಿ.ಸೊಲಬಕ್ಕನವರ ಕೃತಜ್ಞತೆ ಸಲ್ಲಿಸಿದರು.
ಸ್ನೇಹಿತರಾದ ಫಕೀರಪ್ಪ ಈಳಿಗೇರ, ಕೋರಿಶೆಟ್ಟರ, ಹಾಲಪ್ಪ ಕಲ್ಯಾಣ, ಗೆಳೆಯರ ಬಳಗದವರು ಹಾಗೂ ಜಯಶ್ರೀ ಆರ್.ಸೊಲಬಕ್ಕನವರ ಉಪಸ್ಥಿತರಿದ್ದರು. ಅಲ್ತಾಫ ಯತ್ನಳ್ಳಿ ಸ್ವಾಗತಿಸಿದರು. ಬಸವರಾಜ ಹಾವಣಗಿ ವಂದಿಸಿದರು.