ಡಾ.ಚಂದ್ರಕಲಾ ನರಹಟ್ಟಿಗೆ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ 04: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವತರ್ಿ ಇಟಗಿ, ಸಾಂಸ್ಕೃತಿಕ ಉತ್ಸವದಲ್ಲಿ ಕೊಡಮಾಡುವ ಪ್ರತಿಷ್ಠಿತ ಚಾಲುಕ್ಯ ವಿಕ್ರಮಾಧಿತ್ಯ ರಾಜ್ಯ ಪ್ರಶಸ್ತಿಯನ್ನ ನಗರದ  ಮಂಗಳಾ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಚಂದ್ರಕಲಾ ನರಹಟ್ಟಿಯವರ ಉತ್ತಮ ಆರೋಗ್ಯ ಸೇವೆಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಕುಕನೂರ ತಾಲೂಕಿನ ಇಟಗಿ ಗ್ರಾಮದ ದೇವಾಲಯಗಳ ಮಹೇಶ್ವರ  ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಏರ್ಪಡಿಸಿದ ಇಟಗಿ ಸಾಂಸ್ಕೃತಿಕ ಉತ್ಸವ ಮಹದೇವ ದಂಡನಾಯಕ ವೇದಿಕೆಯಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು. ಡಾ.ಚಂದ್ರಕಲಾ ನರಹಟ್ಟಿ 2010ರ ಸಾಲಿನಲ್ಲಿ ಅತ್ಯತುಮ ಪ್ರಸೂತಿ ತಜ್ಞರೆಂದು ಜಿಲ್ಲಾಡಳಿತದಿಂದ ಪ್ರಶಸ್ತಿ ಪಡೆದುಕೊಂಡಿರುವ ಇವರಿಗೆ 2018 ಡಿಸೆಂಬರ್ 7 ರಂದು ಕಲ್ಯಾಣ ಕನರ್ಾಟಕ ಅಚೀವರ್ಸ ಅವಾಡರ್್ ಪ್ರಶಸ್ತಿಗೆ ಭಾಜನರಾದ ಇವರ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ನೀಡಿದ ಉತ್ತಮ ಆರೋಗ್ಯ ಸೇವೆಯ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ  ಮಾಡಲಾಯಿತು. 

ಇಟಗಿ ಉತ್ಸವದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಕವಿ ಸಮ್ಮೇಳನ ಅಧ್ಯಕ್ಷೆ ಅನ್ನಪೂರ್ಣಮ್ಮ ಮನ್ನಪುರ ಹಿರಿಯ ನ್ಯಾಯವಾದಿ ಬೆಳಗಾವಿಯ ಕೆ.ಎಲ್. ಕುಂದರಗಿ ಮತ್ತು ಶ್ರೀಗಳು ಸೇರಿದಂತೆ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ಬಾಬು ಸುವರ್ೆ, ನಾಗರಿಕ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ತಿರುಳ್ಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಎಂ. ಸಾದಿಕ್ ಅಲಿ ಮತ್ತಿತರು ಉಪಸ್ಥಿತರಿದ್ದರು.