ಡಾ ಅಂಬೇಡ್ಕರ ಪರಿನಿವರ್ಾಣ ದಿನಾಚರಣೆ

ಲೋಕದರ್ಶನ ವರದಿ

ಶಿಗ್ಗಾವಿ06 ಃ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಂಸ್ಥೆ, ಜೀವಿಕ ಜಿಲ್ಲಾ ಸಂಸ್ಥೆ ಹಾಗೂ ಜೈ ಕರುನಾಡು ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಡಾ ಅಂಬೇಡ್ಕರ ಪರಿನಿವರ್ಾಣ ದಿನಾಚರಣೆ ಜರುಗಿತು.

         ದಲಿತರು ಸ್ವಾತಂತ್ರ್ಯವಾಗಿ ಉಸಿರಾಡಲು ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರು ನೀಡಿದ ಸಂವಿಧಾನವೇ ಕಾರಣ ಎಂದು ಶಿಶು ಅಭಿವೃದ್ದಿ ಅಧಿಕಾರಿ ಪಿ ವೈ ಗಾಜಿಯವರ ಹೇಳಿದರು.

ಕಾರ್ಯಕ್ರಮದ ನಿಮಿತ್ಯ ಅಂಗನವಾಡಿ ಮಕ್ಕಳಿಗೆ ಅಂಕಲಿಪಿ ವಿತರಿಸಿ ಕೇವಲ ಜೀತದಾಳುಗಳಾಗಿ ದುಡಿಯುತ್ತಿದ್ದ ದಲಿತರಿಗೆ ಸಂವಿಧಾನದ ಮೂಲಕ ಅವರದೇ ಆದ ಹಕ್ಕುಗಳನ್ನು ಪಡೆಯಲು ಸಹಾಯವಾಯಿತು ಜೊತೆಗೆ ಕಡ್ಡಾಯ ಮೀಸಲಾತಿಯ ಮೂಲಕ ಜೀವನ ಸಾಗಿಸುವತ್ತ ದಲಿತರು ದಾಪುಗಾಲಿಟ್ಟಿದ್ದಾರೆ ಅಂಬೇಡ್ಕರ ಅವರು ದಲಿತರ ಉದ್ಧಾರಕ್ಕಾಗಿಯೇ ಬಂದವರು ಅಂಬೇಡ್ಕರ ನೀಡಿದ ಕಾನೂನು ಎಂತಹ ಬಲಿಷ್ಠ ವ್ಯಕ್ತಿಗಳನ್ನು ಸಮಾನವಾಗಿ ಕಾಣಲು ಪ್ರೇರೆಪಣೆಯಾಗಿದೆ ಎಂದರು.

ನ್ಯಾಯವಾದಿ ಬಸವರಾಜ ಜೆಕ್ಕನಕಟ್ಟಿ ಮಾತನಾಡಿ ಸಕರ್ಾರದ ಯೋಜನೆಗಳು ಸಮರ್ಪಕವಾಗಿ ದಲಿತ ಸಮೂದಾಗಳಿಗೆ ಮುಟ್ಟುತ್ತಿಲ್ಲ ಮುಟ್ಟಿಸುವ ನಿಟ್ಟಿನಲ್ಲಿ  ಸಕರ್ಾರಗಳು ಮುಂದಾಗಬೇಕು ದಲಿತ ಸಮೂದಾಯಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಂಸ್ಥೆಯ ಅಧ್ಯಕ್ಷ ಅಶೋಕ ಕಾಳೆ ಮಾತನಾಡಿ ಅಂಬೇಡ್ಕರ ಮೂತರ್ಿಯನ್ನು ಪಟ್ಟಣದಲ್ಲಿ ಪ್ರತಿಷ್ಟಾಪಿಸುವಂತೆ ಸಂಬಂದಿಸಿದವರಲ್ಲಿ ಒತ್ತಾಯಿಸಿದರು.

ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಜೈ ಕರುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಂಕಾರ, ಇಬ್ರಾಹಿಮ್ ಅಂಬಗಿ, ರವಿ ಮಾತೆನವರ, ನೀಲಪ್ಪ ಬನ್ನೂರ, ಯಲ್ಲಪ್ಪ ಚಲವಾದಿ, ನೀಲವ್ವ ಗಾಂಡೋಳಕರ, ಕಮಲವ್ವ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.