ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದ ವೀರಶೈವ ಪಂಚಸೂತ್ರಾಣಿ’ ಕೃತಿ ಲೋಕಾರೆ​‍್ಣ

Dr. Srijagadguru of Kashi Gnana Peetha. Veerashaiva Panchasutrani' written by Chandrasekhara Shivac

ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದ ವೀರಶೈವ ಪಂಚಸೂತ್ರಾಣಿ’ ಕೃತಿ ಲೋಕಾರೆ​‍್ಣ 

ಬೆಂಗಳೂರು 06: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ​‍್ರದೇಶ ವಾರಾಣಾಸಿಯ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬರೆದಿರುವ ‘ವೀರಶೈವ ಪಂಚಸೂತ್ರಾಣಿ’ ಕೃತಿ ಜ.8 ರಂದು (ಬುಧವಾರ) ಇಲ್ಲಿಯ ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯುವ ವಿಶೇಷ ಸಮಾರಂಭದಲ್ಲಿ ಲೋಕಾರೆ​‍್ಣೆಗೊಳ್ಳಲಿದೆ. 

ಹಿಂದೂ ವಿ.ವಿ. ಪಠ್ಯ : ವೀರಶೈವ ಧರ್ಮದ ಪಂಚಪೀಠಗಳಾದ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಮೂಲ ಸೂತ್ರಗಳಾದ ಕ್ರಮವಾಗಿ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಹಾಗೂ ಪಂಚವರ್ಣ ಕುರಿತು ಸಂಪೂರ್ಣ ಸಂಶೋಧನಾ ಉದ್ಗ್ರಂಥವಾಗಿರುವ ‘ವೀರಶೈವ ಪಂಚಸೂತ್ರಾಣಿ’ ಕೃತಿ ಈಗಾಗಲೇ ಸಂಸ್ಕೃತದಲ್ಲಿ ಪ್ರಕಟಗೊಂಡಿದ್ದು, ಅದು ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಧರ್ಮಾಗಮ ವಿಭಾಗದ ಪಠ್ಯವಾಗಿ ಆಯ್ಕೆಯಾಗಿರುವುದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ವಿದ್ವತ್ ಪ್ರಭೆಯನ್ನು ಸಾಕ್ಷೀಕರಿಸುತ್ತದೆ.  

ಒಟ್ಟು 2539 ಸಂಸ್ಕೃತ ಶ್ಲೋಕಗಳನ್ನು ಒಳಗೊಂಡ ‘ವೀರಶೈವ ಪಂಚಸೂತ್ರಾಣಿ’ ಕೃತಿಯ ಕನ್ನಡ ಅನುವಾದ ಕೃತಿ ಇದಾಗಿದೆ. ವೀರಶೈವ ಧರ್ಮದ ಪಂಚಪೀಠಗಳ ಸೂತ್ರಗಳ ಸಂಪೂರ್ಣ ಅರ್ಥ ವಿವರಣೆ ಮತ್ತು ವಿಸ್ತೃತ ವ್ಯಾಖ್ಯಾನದ ಆಳವಾದ ವಿಶ್ಲೇಷಣೆ ಈ ಕೃತಿಯಲ್ಲಿ ಅಡಕವಾಗಿದೆ. ವೀರಶೈವ ವಾಙ್ಮಯ ವಿಹಾರದಲ್ಲಿ ಬಹಳ ಅಪರೂಪದ ದಾರ್ಶನಿಕ ಗ್ರಂಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 560 ಪುಟಗಳ ಈ ವಿಶಿಷ್ಟ ಕೃತಿಯನ್ನು ಕಾಶಿ ಜ್ಞಾನ ಪೀಠದ ಶೈವಭಾರತಿ ಶೋಧ ಪ್ರತಿಷ್ಠಾನವು ಹೊರತಂದಿದೆ.  

ಲೋಕಾರೆ​‍್ಣ : ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಸೂರ್ಯ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕೃತಿ ಲೋಕಾರೆ​‍್ಣ ಮಾಡುವರು. ಕೃತಿ ರಚಿಸಿರುವ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶಿವಗಂಗಾಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಪುರಮಠದ  ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಸಂಸ್ಕೃತ ವಿದ್ವಾಂಸ ಡಾ. ಸಿ. ಶಿವಕುಮಾರಸ್ವಾಮಿ ಹಾಗೂ ಸಂಸ್ಥೆ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಪಾಲ್ಗೊಳ್ಳುವರು. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಕೋ. ರಂ. ಬಸವರಾಜು ಕೃತಿ ಪರಿಚಯ ಮಾಡುವರೆಂದು ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಬೆಂಗಳೂರು ಶಾಖೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.