ರಾಜೀವ ಗಾಂಧಿ ವಿವಿ ಅಧ್ಯಯನ ಮಂಡಳಿ ಸದಸ್ಯರಾಗಿ ಡಾ ಸಂಜೀವ ನೇಮಕ

Dr. Sanjeeva appointed as a member of the Board of Studies of Rajiv Gandhi University

ರಾಜೀವ ಗಾಂಧಿ ವಿವಿ ಅಧ್ಯಯನ ಮಂಡಳಿ ಸದಸ್ಯರಾಗಿ ಡಾ ಸಂಜೀವ ನೇಮಕ 

ವಿಜಯಪುರ 23: ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಡಾ ಸಂಜೀವ ಹರಳಯ್ಯ ಅವರನ್ನು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಸದಸ್ಯರಾಗಿ ನೇಮಕ ಮಾಡಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಲ್ಲಕ್ಕಿ ರಾಮಣ್ಣ ಶಿವಪ್ರಸಾದ ಅವರು ಆದೇಶ ಹೊರಡಿಸಿದ್ದಾರೆ. 

ನರ್ಸಿಂಗ್ ವಿಜ್ಞಾನದಲ್ಲಿ ಪಿಎಚ್ ಡಿ ಪದವಿ ಪಡೆದಿರುವ ಡಾ ಸಂಜೀವ ಅವರು ಪ್ರಸ್ತುತ ಗದಗನ ಸರಕಾರಿ ಶುಶೂಷ್ರಕ ಮಹಾವಿದ್ಯಾಲಯದಲ್ಲಿ ಮನಶಾಸ್ತ್ರದ ಸಹಾಯಕ ಪ್ರಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಜಿಲ್ಲೆಯ ಪ್ರತಿಭಾನ್ವಿತ ಪ್ರಾಧ್ಯಾಪಕರಾದ ಹರಳಯ್ಯ ಅವರು ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದಕ್ಕೆ ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ, ಹಾಗೂ ಕಾರ್ಯಾಧ್ಯಕ್ಷ ಕಲ್ಲಪ್ಪ ಶಿವಶರಣ ಹರ್ಷ ವ್ಯಕ್ತಪಡಿಸಿದ್ದಾರೆ.