ಡಾ ಎಸ್ ಎಮ್ ಖೋತ್ ಬೆಸ್ಟ್‌ ರಿಸರ್ಚರ್ ಅವಾರ್ಡ್‌

Dr. S. M. Khot Best Researcher Award

ಡಾ ಎಸ್ ಎಮ್ ಖೋತ್ ಬೆಸ್ಟ್‌ ರಿಸರ್ಚರ್ ಅವಾರ್ಡ್‌  

 ಬಾಗಲಕೋಟೆ  23 : ಇಲ್ಲಿನ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕ ರಾಗಿರುವ ಡಾ ಶ್ರೀಶೈಲ ಎಮ್ ಖೋ ತ್ ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ನ ವಿದ್ಯಾಸಾಗರ ಕಾಲೇಜಸ್ ನೀಡುವ "ಬೆಸ್ಟ್‌ ರಿಸರ್ಚ್‌ ಅವಾರ್ಡ್‌ 2025" ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇವರು ಶಿಕ್ಷಣ ಮತ್ತು ಸಂಶೋಧನೆಗೆ ನೀಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪಡೆದ ಇವರನ್ನು ಬಾಗಲಕೋಟೆ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ ವೀರಣ್ಣ ಚರಂತಿ ಮಠ ಗೌರವ ಕಾರ್ಯದರ್ಶಿಗಳಾದ ಮಹೇಶ್ ಎನ್ ಅಥಣಿ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ ಪದ ನಿಮಿತ್ತ ಕಾರ್ಯದರ್ಶಿಗಳಾದ ಡಾ.ಎಸ್‌. ಎಂ ಗಾವ್ಕರ ಪ್ರಾಚಾರ್ಯರಾದ ಪ್ರೊ ಟಿ ಬಿ ಕೋರಿ ಶೆಟ್ಟಿ ಹಾಗೂ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.