ವಿಜಯವಾಡ, ನ 29- ಹೈದ್ರಾಬಾದ್ ನಲ್ಲಿ ಬುಧವಾರ - ಗುರುವಾರ ಮಧ್ಯರಾತ್ರಿ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಚಾರ ಹಾಗೂ ಭೀಕರ ಹತ್ಯೆ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್ . ಚಂದ್ರಬಾಬು ನಾಯ್ಡು ತೀವ್ರ ನೋವು ವ್ಯಕ್ತಪಡಿಸಿದ್ದಾರೆ
26 ವರ್ಷದ ಶಾದ್ ನಗರ್ ಪಶು ವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅವರನ್ನು ಭಯಾನಕವಾಗಿ ಹತ್ಯೆ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ
ಆಕೆಯ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪ ಸೂಚಿಸುತ್ತೇನೆ. ಪರಮ ನೀಚ ಕೃತ್ಯ ಎಸಗಿದವರನ್ನು ಕಾನೂನಿನ ಕಕ್ಷೆಗೆ ಒಳಪಡಿಸಬೇಕು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ದುಷ್ಕರ್ಮಿಗಳಿಗೆ ನಾಗರೀಕ ಸಮಾಜದಲ್ಲಿರುವ ಹಕ್ಕುಇವರಿಗಿಲ್ಲ ಎಂದು ಹೇಳಿದ್ದಾರೆ
ಕಠಿಣ ಶಿಕ್ಷೆ ಮತ್ತು ಕಣ್ಗಾವಲು ಹೊರತಾಗಿಯೂ, ಇಂದಿನ ಯುವಕರು, ಮಹಿಳೆಯರನ್ನು ಸಮಾನರೆಂದು ಗೌರವಿಸುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ಲಿಂಗ ಸಮಾನತೆ ಮತ್ತು ಲೈಂಗಿಕ ಶಿಕ್ಷಣ ಕಲಿಸಬೇಕು. ಅದು ಮನೆ ಅಥವಾ ಶಾಲೆ.. ಎಲ್ಲೆ ಇರಲಿ. ಬದಲಾವಣೆ ಮುನ್ನಡೆಸಲು ಪ್ರತಿಯೊಬ್ಬ ವ್ಯಕ್ತಿಯೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ನಾಯ್ಡು ಹೇಳಿದ್ದಾರೆ.
ಈ ನಡುವೆ, ಪಶುಸಂಗೋಪನಾ ವೈದ್ಯರು ತೆಲಂಗಾಣ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಡಾ. ಪ್ರಿಯಾಂಕಾ ರೆಡ್ಡಿ ಚಿತ್ರಗಳನ್ನು ಹಿಡಿದು ಪಶುಸಂಗೋಪನಾ ಆಸ್ಪತ್ರೆಗಳ ಮುಂದೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಘಟನೆ ವಿರುದ್ದ ವೈದ್ಯರು ಪ್ರತಿಭಟನೆ ನಡೆಸಿದರು
ಕೃತ್ಯ ನಡೆಸಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಶುಸಂಗೋಪನಾ ಇಲಾಖೆಯ ಮಹಿಳಾ ವೈದ್ಯರು ಆಗ್ರಹಿಸಿದರು.