ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನಾಚರಣೆ
ಧಾರವಾಡ 01: ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ದಿಂದ ನಿನ್ನೆ (ಡಿ.31) ಬೆಳಿಗ್ಗೆ 10 ಗಂಟೆಗೆ ಆಕಾಶವಾಣಿ ಎದುರುಗಡೆ ಇರುವ ಟ್ರಸ್ಟ್ ಕಚೇರಿ ಆವರಣದಲ್ಲಿ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನದ ಅಂಗವಾಗಿ ಅವರ ಸಮಾಧಿಗೆ ಪುಷ್ಪಾರ್ಚಣೆ ಮಾಡುವುದರೊಂದಿಗೆ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಹಿರಿಯ ಸದಸ್ಯ ಪಂ. ಎಂ. ವೆಂಕಟೇಶಕುಮಾರ, ಡಾ. ದೀಲೀಪ ದೇಶಪಾಂಡೆ, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಉಪಸ್ಥಿತರಿದ್ದರು. ಪಂ. ಮಲ್ಲಿಕಾರ್ಜುನ ಮನಸೂರ ಅವರ ಮಗಳು ಅಕ್ಕಮಹಾದೇವಿ ಆಲೂರ, ಹಿರಿಯ ಸಂಗೀತಗಾರ ಡಾ. ಶಾಂತಾರಾಮ ಹೆಗಡೆ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಮೃತ್ಯುಂಜಯ ಶೆಟ್ಟರ, ಡಾ. ಅಶೋಕ ಹುಗ್ಗಣ್ಣವರ, ಪಂ. ಸಾತಲಿಂಪ್ಪ ದೇಸಾಯಿ ಕಲ್ಲೂರ, ಎಂ.ಕೆ ಹೆಗಡೆ, ಡಾ. ಪರಶುರಾಮ ಕಟ್ಟಿಸಂಗಾವಿ, ಪಂ. ಅಲ್ಲಮಪ್ರಭು ಕಡಕೋಳ, ಮುಂತಾದವರು ಡಾ. ಮಲ್ಲಿಕಾರ್ಜುನ ಮನಸೂರ ಅವರ ಸಮಾಧಿಗೆ ನಮನ ಸಲ್ಲಿಸಿದರು.