ಮುಧೋಳ ಕಂಠಿ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಎಮ್‌.ಆರ್‌.ಜರಕುಂಟಿ ನೇಮಕ

ಮುಧೋಳ ಕಂಠಿ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಎಮ್‌.ಆರ್‌.ಜರಕುಂಟಿ ನೇಮಕ Dr. M.R. Jarakunti appointed as new principal of Mudhol Kanthi College

ಮುಧೋಳ ಕಂಠಿ ಕಾಲೇಜ್ ನೂತನ ಪ್ರಾಚಾರ್ಯರಾಗಿ ಡಾ.ಎಮ್‌.ಆರ್‌.ಜರಕುಂಟಿ ನೇಮಕ 

ಮುಧೋಳ 02: ಬಾಗಲಕೋಟ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರ ಆದೇಶದಂತೆ ಅಗಸ್ಟ್‌ 1ರಿಂದ ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯಕ್ಕೆ ನೂತನ ಪ್ರಾಚಾರ್ಯರಾಗಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಮ್‌.ಆರ್‌.ಜರಕುಂಟಿ ನೇಮಕಗೊಂಡಿದ್ದಾರೆ. 

ಈ ಮೊದಲು ಪ್ರಾಚಾರ್ಯರಾಗಿದ್ದ ಪ್ರೊ.ಎಮ್‌.ವ್ಹಿ.ಜಿಗಬಡ್ಡಿ ಅವರು ಜು.31 ರಂದು ಸೇವಾ ನಿವೃತ್ತಿ ಯಿಂದಾಗಿ ತೆರವುಗೊಂಡಿರುವ ಪ್ರಾಚಾರ್ಯರ ಸ್ಥಾನಕ್ಕೆ ಸಂಘದ ಬೋಧಕರ ಸೇವಾ ಜೈಷ್ಠತಾ ಪಟ್ಟಿಯಲ್ಲಿ ಹಿರಿಯರಾಗಿದ್ದ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಮ್‌.ಆರ್‌. ಜರಕುಂಟಿ ಅವರನ್ನು ಸಂಘದ ಕಾರ್ಯಾಧ್ಯಕ್ಷರು ಪ್ರಾಚಾರ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

ಪ್ರಾಚಾರ್ಯರಾಗಿ ಸೇವಾ ನಿವೃತ್ತಿಹೊಂದಿರುವ ಪ್ರೊ.ಎಮ್‌.ವ್ಹಿ.ಜಿಗಬಡ್ಡಿ ಅವರು ಮಹಾವಿದ್ಯಾಲಯ ಕ್ಕೆ ನೂತನ ಪ್ರಾಚಾರ್ಯರಾಗಿ ನೇಮಕಗೊಂಡಿರುವ ಡಾ.ಎಮ್‌.ಆರ್‌.ಜರಕುಂಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 

ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯ ರವೀಂದ್ರ ಎಸ್‌. ಸಾವಳಗಿ ಮಠ, ಬಾಗಲಕೋಟ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್‌.ಆರ್‌. ಮುಗನೂರಮಠ, ಬಾಗಲಕೋಟ ವಿದ್ಯಾಗಿರಿಯ ಬಿವ್ಹಿವ್ಹಿ ಸಂಘದ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಬಿ.ಆರ್‌.ಪಾಟೀಲ ಹಾಗೂ ಭೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.