ಡಾ. ಫ.ಗು. ಹಳಕಟ್ಟಿ & ಶಿ ಜ. ಲಿಂಗಾನಂದ ಸ್ವಾಮೀಜಿಗಳ ಸಂಸ್ಮರಣೋತ್ಸವ ವಚನ ಸಾಹಿತ್ಯವೆಂದರೆ ಆಚರಣೆಯ ಸಾಹಿತ್ಯ!

ಬೆಳಗಾವಿ, 1: 12ನೇ ಶತಮಾನದ ಶರಣರು ಸ್ವಾನುಭಾವದ ಮೂಸೆಯಲ್ಲಿ ರಸದೌತಣ ಉಣಬಡಿಸಿದ ವೈಜ್ಞಾನಿಕ ಮೇಧಾವಿಗಳು ಅವರು. ಪ್ರಾಕೃತಿಕ, ಸಾಮಾಜಿಕ, ನೈತಿಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವಾರು ಮಾನವೀಯ ನೆಲೆಗಟ್ಟಿನಲ್ಲಿ ವಿವೇಚಿಸಿ, ಕಾರ್ಯಗತಗೊಂಡ ಅವರ ಸಾಧನೆ ಅನನ್ಯ. ಯಾವುದೇ ಜಾತಿ, ಮತ, ಪಂಥ ಬೇಧವಿಲ್ಲದೆ, ಎಲ್ಲರ ಏಳ್ಗೆಗಾಗಿ ಸಾಗಿದ ಅವರ ಜೀವನ ವಿಧಾನ, ಅದರ ಮೇಲೆ ರಚಿಸಿದ ವಚನ ಸಾಹಿತ್ಯವು ಅನುಭಾವದ ಮೇರು ಪರ್ವತವೇ ಆಗಿದೆ, ಇದು ಕೇವಲ ಬೋಧನಾ ಪ್ರಧಾನವಾದುದಲ್ಲ, ಇದು ಆಚರಣೆಗಾಗಿರುವ ಸಾಹಿತ್ಯ, ಇಂಥಹಾ ಸಾಹಿತ್ಯ ಅಂದು ಮರೆಮಾಚಿ ಹೋಗಿದ್ದುದನ್ನು ಮನಗೊಂಡು ಇದಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟು ದುಡಿದವರು ಹಿರಿಯ ಶರಣ ಡಾ. ಫ.ಗು. ಹಳಕಟ್ಟಿಯವರು ವಚನ ಶಾಸ್ತ್ರ ಪಿತಾಮಹರೆಂದೇ ಪ್ರಖ್ಯಾತಿ ಆದವರು, ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು, ಆ ವಚನಗಳನ್ನು ತಮ್ಮ ವಿಶೇಷ ಪ್ರವಚನಗಳ ಮೂಲಕ ಬಿತ್ತಿ, ವಿಶ್ವಗುರು ಬಸವಣ್ಣನವರ ಹಾಗೂ ಶರಣರ ಸಂದೇಶಗಳನ್ನು ಮನೆ ಮಾತಾಗುವಂತೆ ಮಾಡಿದ ಶ್ರೇಷ್ಠತೆಯಿಂದ  "ಪ್ರವಚನ ಪಿತಾಮಹ" ರೆಂದು ಖ್ಯಾತಿಯಾದವರು. ಅನುಭಾವಿಗಳು ಹೇಳುವ ಗ್ರಂಥಗಳನ್ನು ರಚನೆ ಮಾಡುವ ವ್ಯಕ್ತಿತ್ವವನ್ನಾಗಲಿ ಅಥವಾ  ಗ್ರಂಥ ರಚನೆಗೆ ಪೂರಕವಾದ ವ್ಯಕ್ತಿತ್ವವ ವಿಕಸನವನ್ನಾಗಲಿ ರೂಢಿಸಿಕೊಳ್ಳ ಬೇಕೆಂಬ ಜಾಣ್ಮೆಯ ಮಾತನ್ನು ಉಭಯತರೂ ಸಾಧಿಸಿ ತೋರಿಸಿದವರು ! 

     ಹೀಗೆ, ಕನರ್ಾಟಕ ಸಕರ್ಾರದ ಕೌಶಲಾಭಿವೃದ್ಧಿ ಕೋಶದ ಶರಣ ರಮೇಶ್ ಭೈರಾಜಿ ಮತ್ತು ಬೆಳಗಾವಿ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷರಾದ ಶರಣ ಮಹಾಂತೇಶ ಗುಡಸ್ ರವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 

ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ಬಸವಾಂಕುರಗಳ ಸಂಯುಕ್ತ ಆಶ್ರಯದಲ್ಲಿ - ಬೆಳಗಾವಿಯ ಗೋಕಾಕ್ ರಸ್ತೆಯಲ್ಲಿರುವ 'ವಿಶ್ವಗುರು ಬಸವ ಮಂಟಪ'ದಲ್ಲಿ - ರವಿವಾರ, ತಾ|| 30.06.2019ರಂದು ನೆಡೆದ ವಾರದ ಸಾಮೂಹಿಕ ಪ್ರಾರ್ಥನೆಯ "ಶರಣ ಸಂಗಮ"ದಲ್ಲಿ ವಚನ ಶಾಸ್ತ್ರ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 56ನೇ ಮತ್ತು  ಪ್ರವಚನ ಕಲೆ ಪಿತಾಮಹರಾದ ಪೂಜ್ಯಶ್ರೀ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಗಳ 25ನೇ ದಿವ್ಯ ಲಿಂಗೈಕ್ಯ ಸಂಸ್ಮರಣೆಯನ್ನು ಆಚರಿಸಲಾಯಿತು. 

    ಕನರ್ಾಟಕ ಸಕರ್ಾರದ ಕೌಶಲಾಭಿವೃದ್ಧಿ ಕೋಶದ ಶರಣ ರಮೇಶ್ ಭೈರಾಜಿಯವರು ಡಾ. ಫ.ಗು ಹಳಕಟ್ಟಿಯವರ ವಿಶೇಷ ಪರಿಶ್ರಮದಿಂದಾಗಿ "ವಚನ ಸಾಹಿತ್ಯ ಇಂದು ನಾವು ನೋಡಲು, ಅನುಭಾವಿಸಲು ಸಾಧ್ಯಯಾಯಿತೆಂದು, ಅವರ ಜೀವನ & ಸಾಧನೆ ಕುರಿತು ಮನೋಜ್ಞವಾಗಿ ಬಣ್ಣಿಸಿದರು. 

       ಲಿಂಗಾಯತ ಧರ್ಮ ಮಹಾ ಸಭಾದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶರಣ ಮಹಾಂತೇಶ ಗುಡಸ್ ಪೂಜ್ಯ ಲಿಂಗಾನಂದ ಮಹಾ ಸ್ವಾಮೀಜಿಗಳ ಸಾಧನೆ ಕುರಿತು ಮಾತನಾಡುತ್ತಾ, ಕೇವಲ ಪುಸ್ತಕದಲ್ಲಿರುವ ವಚನ ಸಾಹಿತ್ಯವನ್ನು ಮನೆ ಮನಗಳಿಗೆ ತಲುಪಿಸಿದ ಕೀತರ್ಿ ಪೂಜ್ಯ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಎಂದರು. ಬಡತನದಲ್ಲಿ ಧೀರೋದಾತ್ತವಾಗಿ ಬೆಳೆದ ದಿವ್ಯ ಚೇತನ, ಇಂದು ಎಲ್ಲರ ಭಾವಗಳಲ್ಲಿ "ಬಸವ" ಎಂಬ ಮೂರಕ್ಷರಗಳು ವಿಶ್ವಮಾನ್ಯ ವಾಗುವುದಕ್ಕೆ ಮೂಲ ಕಾರಣವೇ ಲಿಂಗಾನಂದರು ಎಂದು ವಣರ್ಿಸಿದರು. 

     ವಿಶ್ವಗುರು ಬಸವ ಮಂಟಪದ ಸಂಚಾಲಕರಾದ ಪೂಜ್ಯ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂದೇಶ ನೀಡಿದರು.  ಬೆಳಗಾವಿ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷರಾದ ಶರಣ ಅಶೋಕ ಬೆಂಡಿಗೇರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣ ಮಾರಯ್ಯ ಗಡಗಲಿ ಸ್ವಾಗತ ಕೋರಿ, ಪ್ರಾಸ್ತಾವಿಕ ಮಂಡಿಸಿದರು.

      ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಶ್ರೀಗುರು ಬಸವ ಪೂಜೆ ಮತ್ತು ಪೂಜ್ಯ ಲಿಂಗಾನಂದ  ಸ್ವಾಮೀಜಿ ಹಾಗೂ ಡಾ. ಹಳಕಟ್ಟಿಯವರ ಭಾವ ಚಿತ್ರಗಳಿಗೆ ಪೂಜೆಯನ್ನು ಶರಣ ಚಂಬಪ್ಪ ಮರಕಟ್ಟಿ & ಶರಣೆಯರು ಸಲ್ಲಿಸಿದರು.  ಶರಣ ದಂಪತಿ ರೇಣುಕಾ ಮತ್ತು ಚಂಬಪ್ಪ ಮರಕಟ್ಟಿಯವರಿಂದ ಬಸವಧ್ವಜಾರೋಹಣ ನೆರವೇರಿತು .ಶರಣ ಕೆ. ಬಸವರಾಜ ನಿರೂಪಿಸಿದರು, ಶರಣೆ ನೀಲಗಂಗಾ ಪಾಟೀಲ್ ಶರಣು ಸಮರ್ಪಣೆಗೈದರು.