‘ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಅಮರೇಶ ಯತಗಲ್ ಆಯ್ಕೆ
ಕಲಬುರಗಿ 08: ಇಲ್ಲಿನ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತವು ಪ್ರತಿವರ್ಷದಂತೆ ಈ ವರ್ಷವು 2023ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದ್ದು, ಕನ್ನಡನಾಡು ಪ್ರಕಾಶನದ 2024ರ ಹತ್ತು ಕೃತಿಗಳ ಲೋಕಾರೆ್ಣ ಮತ್ತು 2023ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಅಮರೇಶ ಯತಗಲ್ ಅವರ ‘ಗತಾನುಶೀಲನ’(ಇತಿಹಾಸ-ಸಂಸ್ಕೃತಿ) ಕೃತಿಗೆ ‘ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿರುತ್ತದೆ. ಈ ಪ್ರಶಸ್ತಿಯು ಫಲಕ ಹಾಗೂ ಗೌರವಧನ ರೂ. 5000 (ಐದು ಸಾವಿರ)ಗಳನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು, ದಿ. 9ರಂದು ರವಿವಾರ ಬೆಳಗ್ಗೆ 10ಗಂಟೆಗೆ ಕಲಬುರಗಿಯ ಕನ್ನಡ ಸಾಹಿತ್ಯ ಸಂಘ, ವ್ಹಿ.ಜಿ. ಮಹಿಳಾ ಕಾಲೇಜಿನಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.