ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಜನಾಂಗದ ಆಶಾಕಿರಣ; ಧರನಾಕರ

Dr. Babasaheb Ambedkar is a ray of hope for the Dalit community; Dharanakar

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಜನಾಂಗದ ಆಶಾಕಿರಣ; ಧರನಾಕರ 

ವಿಜಯಪುರ, 10 : ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಜನಾಂಗದ ಆಶಾಕಿರಣ ಸಾಮಾಜಿಕ ಕ್ರಾಂತಿಯ ಸಂಕೇತ ಪ್ರಗತಿಗೆ ವಿದ್ಯೆಯೇ ಮೂಲ ಎಂಬ ಸಂದೇಶವನ್ನು ಸಾರಿದ ಅಂಬೇಡ್ಕರ್ ರವರು ಭಾರತಕ್ಕೆ ಮೊದಲು ಸಾಮಾಜಿಕ ಸ್ವಾತಂತ್ರ ದೊರಕಬೇಕೆಂದು ಪ್ರತಿಪಾದಿಸಿದ, ಶೋಷಿತ ಜನಾಂಗದ ವಿಕಾಸಕ್ಕೆ ಮಾರ್ಗೋಪಾಯಗಳನ್ನು ಚಿಂತಿಸಿದವರು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ವಿಜಯಪುರ ಸಂಘಟನಾ ಸಂಚಾಲಕ ರಮೇಶ ಧರನಾಕರ ಹೇಳಿದರು. 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ವಿಜಯಪುರ ಸಂಘಟನಾ ಸಂಚಾಲಕ ರಮೇಶ ಧರನಾಕರ ಅಧ್ಯಕ್ಷತೆ ಮತ್ತು ಅತಿಥಿಗಳ ನೇತೃತ್ವದಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನು ಮತದಿಂದ ನೂತನ ತಾಲೂಕು ಡಿಎಸ್‌ಎಸ್ ತಿಕೋಟಾ ಪದಾಧಿಕಾರಿಗಳನ್ನು ದಿನಾಂಕ: 09-03-2025 ತಿಕೋಟಾದಲ್ಲಿ ಹಮ್ಮಿಕೊಂಡ ಪ್ರವಾಸಿ ಮಂದಿರದ ಸಭೆಯಲ್ಲಿ ಅವರು ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು, ಭಾರತದ ಜಾತಿ ಪದ್ಧತಿಯಲ್ಲಿ ಎಲ್ಲಾ ಅನಿಷ್ಠಗಳಿಗೆ ಕಾರಣ ಅದು ನಿವಾರಣೆ ಆಗದೆ ಭಾರತ ಪ್ರಗತಿ ಅಸಾಧ್ಯ ಎಂದು ದೃಢವಾಗಿ ನಂಬಿದವರು ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆಯ ಪರಿಕಲ್ಪನೆಯನ್ನು ಆದರಿಸಿ ಹಿಂದೂ ಸಮಾಜದ ಪುನರ್ ನಿರ್ಮಾಣ ಆಗಬೇಕೆಂದು ನಂಬಿ ಅದರ ಅನುಷ್ಠಾನಕ್ಕಾಗಿ ಹೋರಾಡಿದ ಧಿಮಂತ್ ಚೇತನ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ತತ್ವ ಸಿದ್ಧಾಂತ ತಳಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಸಾಗರ ಸಂಘಟನೆ ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ವಿವಿಧ ಸಾವಿರಾರು ಹೋರಾಟಗಳ ಮುಖಾಂತರ ಸಾಮಾಜಿಕ ಜಾಗೃತಿಗೊಳಿಸುತ್ತಾ  ಮುನ್ನುಗ್ಗುತ್ತಿದೆ ಎಂದರು. 

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ವಿಜಯಪುರ ಸಂಘಟನಾ ಸಂಚಾಲಕ ರಮೇಶ ಧರನಾಕರ ಅಧ್ಯಕ್ಷತೆ ಮತ್ತು ಅತಿಥಿಗಳ ನೇತೃತ್ವದಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನು ಮತದಿಂದ ನೂತನ ತಾಲೂಕು ಡಿಎಸ್‌ಎಸ್ ತಿಕೋಟಾ ಪದಾಧಿಕಾರಿಗಳನ್ನು ದಿನಾಂಕ: 09-03-2025 ಸ್ಥಳ ತಿಕೋಟಾದಲ್ಲಿ ಪ್ರವಾಸಿ ಮಂದಿರದಲ್ಲಿ ಈ ಕೆಳಕಂಡ ಹೆಸರಿನವರನ್ನು ಆಯ್ಕೆಮಾಡಲಾಯಿತು. 

ತಾಲೂಕಾ ಸಂಚಾಲಕರನ್ನಾಗಿ ಪ್ರಶಾಂತ ಝಂಡೆ, ಸಂಘಟನಾ ವಿಭಾಗ ಶಿಸ್ತು ಮತ್ತು ತರಬೇತಿ ವಿಭಾಗಕ್ಕೆ ವಿಜಯ ಖ್ಯಾತನ, ಪೌರ ಕಾರ್ಮಿಕ ವಿಭಾಗಕ್ಕೆ ಅರವಿಂದ ಕುದರಿ, ಖಜಾಂಚಿಯಾಗಿ ರಾಜಕುಮಾರ ಕಳ್ಳಿಮನಿ, ದಲಿತ ಹಿಂದುಳಿದ ಸಂಘಟನಾ ಸಂಚಾಲಕರಾಗಿ ಮಾನಿಂಗ ಜವನರ, ಸಂಘಟನಾ ಸಂಚಾಲಕರಾಗಿ ಭೀಮು ಪಾಂಡಿಚೇರಿ, ಅನೀಲ ಕಾಂಬಳೆ, ಶೇಖರ ಮಲಕನವರ, ಮಚ್ಚೆಂದ್ರ ಝಂಡೆ, ಜಗದೀಶ ಶಿಂದೆ ಅವರನ್ನು ಆಯ್ಕೆ ಮಾಡಲಾಯಿತು. 

ಈ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕ ಸಮಿತಿ ತಿಕೋಟಾ ನೂತನ ಆಯ್ಕೆಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಾದ ವಿಜಯಕುಮಾರ ಕಾಂಬಳೆ, ಸಂಚಾಲಕರು ತಾಲೂಕಾ ಹಾಗೂ ಮುಖಂಡರಾದ ಗಂಗಾಧರ ಬನ್ನೂರ, ಸದಾಶಿವ ಚಿಗದೋಳ, ಸಾಬು ಕಾಂಬಳೆ, ಮಚ್ಚೇದ್ರ ಗುರಸಿದ್ದನವರ, ಶಿವಪ್ಪ ಚಲವಾದಿ, ಸದಾಶಿವ ಮಲಕನವರ, ಪರಶುರಾಮ ನಾಟಿಕಾರ, ಹಣಮಂತ ಮಲಕನವರ, ಉತ್ತಮ ಝಂಡೆ, ಚಿದಾನಂದ ಕ್ಯಾತನ, ಉಮೇಶ ಕಳ್ಳಿಮನಿ, ಸುಖದೇವ ಆಕಾಶ, ಸುನೀಲ ತುದಿಗಾಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.