ಬಳ್ಳಾರಿ ಜಿಲ್ಲೆ ಜೆಡಿಎಸ್ ಕಚೇರಿಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಆಚರಣೆ

Dr. BR Ambedkar's 134th birth anniversary celebration at JDS office in Bellary district

ಬಳ್ಳಾರಿ ಜಿಲ್ಲೆ ಜೆಡಿಎಸ್ ಕಚೇರಿಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಆಚರಣೆ

ಬಳ್ಳಾರಿ 14: ಜಿಲ್ಲಾ ಜೆಡಿಎಸ್  ಅಧ್ಯಕ್ಷರಾದ ಮೀನಲ್ಲಿ ತಾಯಣ್ಣನವರ  ಆದೇಶದ ಮೇರೆಗೆ 134 ನೇ ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವವನ್ನು ಬಳ್ಳಾರಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಚರಿಸಲಾಯಿತು ಇದೇ ವೇಳೆ  ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹೂ ಆರೆ​‍್ನ ಮಾಡಿ  ನಂತರ ಹೊಸಪೇಟೆ ರಸ್ತೆಯಲ್ಲಿರುವ ಡಾಕ್ಟರ್ ಅಂಬೇಡ್ಕರ್ ಭವನದಲ್ಲಿ ಇರುವ ಅಂಬೇಡ್ಕರ್ ಅವರ ಪುತ್ತಲೆಗೆ ಮಾಲಾರೆ​‍್ಣ ಮಾಡುವ ಮುಖಾಂತರ ಗೌರವ ನಮನ ಸಲ್ಲಿಸಿದರು. 

 ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಲ್ಲಿ ತಾಯಣ್ಣನವರ ಆದೇಶದ ಮೇರೆಗೆ ಡಾ. ಅಂಬೇಡ್ಕರ್ ಅವರನ್ನು ಉದ್ದೇಶಿಸಿ ರುದ್ರಮುನಿಅವರು ಮಾತನಾಡಿ,ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ವಕೀಲರೂ, ಸಮಾಜ ಸುಧಾರಕರೂ ಆಗಿದ್ದ ಅಂಬೇಡ್ಕರ್ ಶಿಕ್ಷಣ, ಅಸ್ಪೃಶ್ಯತೆಯನ್ನು ತೊಡೆದು ಹಾಕುವಲ್ಲಿ, ಸಮಾನತೆಗೆ ಅಪೂರ್ವವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ಜನ್ಮ ಜಯಂತಿಯ ಶುಭ ಸಂದರ್ಭದಲ್ಲಿ ನಾವು ಅವರಿಂದ ಕಲಿಯಬೇಕಾಗಿರುವ ಜೀವನ ಪಾಠಗಳು ಸಂವಿಧಾನ ಶಿಲ್ಪಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ  ಡಾ. ಭೀಮರಾವ್  ಅಂಬೇಡ್ಕರ್ (ಃಟಚಿಡಿಚಿಠ ಖಚಿಟರಿ ಂಟಛಜಜಞಚಿಡಿ) ಡಾ. ಬಿ.ಆರ್ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದವರು.  

ಅಂಬೇಡ್ಕರ್  (ಂಟಛಜಜಞಚಿಡಿ) ಅವರ ಬದುಕು, ತತ್ವ, ಆದರ್ಶಗಳು, ಚಿಂತನೆಗಳು ನಮ್ಮೆಲ್ಲರ ಪಾಲಿಗೆ ಪ್ರೇರಣೆ ಅಂದರೆ ತಪ್ಪಾಗಲಾರದು.  ಏಪ್ರಿಲ್ 14 ರಂದು ಭಾರತ ಕಂಡ ಈ ಶ್ರೇಷ್ಠ ನಾಯಕನ ಜನ್ಮ ದಿನ. ಇವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ಭಾರತದಾದ್ಯಂತ ಅಂಬೇಡ್ಕರ್ ಜಯಂತಿಯನ್ನು (ಂಟಛಜಜಞಚಿಡಿ ಎಚಿಥಿಚಿಟಿಣ) ಆಚರಿಸಲಾಗುತ್ತದೆ. ಪ್ರಗತಿ, ಸಮಾನತೆಯ ಕನಸು ಕಂಡ ಈ ಮೇರು ನಾಯಕನ ಜನ್ಮ ದಿನದ ಶುಭ ಸಂದರ್ಭದಲ್ಲಿ ಅವರ ಜೀವನದ ಒಂದಷ್ಟು ಆದರ್ಶಗಳನ್ನು, ಜೀವನ ಪಾಠಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು . ಈ ಸಂದರ್ಭದಲ್ಲಿ ಬಳ್ಳಾರಿ ನಗರ ಘಟಕದ ಅಧ್ಯಕ್ಷರಾದ ಹೊನ್ನೂರು ಸ್ವಾಮಿ (ವಂಡ್ರಿ),  ಅಶೋಕ ಸಂಗನಕಲ್ಲು ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ,ಕಿರಣ್ ಕುಮಾರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ, ರುದ್ರಮುನಿ ,ಪ್ರದೀಪ್, ಮಹಿಳಾ ಅಧ್ಯಕ್ಷರಾದ ಪುಷ್ಪಾ, ವಿಜಯ ,ರಮಾದೇವಿ, ರಾಜೇಶ್ವರಿ, ಜಯಲಕ್ಷ್ಮೀ , ಪ್ರಭಾಕರ ರೆಡ್ಡಿ, ಶಿವ ರೆಡ್ಡಿ,ರಾಮು,ವೃಂದಾವನಿ, ಹಾಗೂ ಇತರ ಕಾರ್ಯಕರ್ತರು ಸೇರಿದ್ದರು.