’ರಾಜಕೀಯ ಸಂವಹನ’ ಕುರಿತ ಡಾ.ಬಿ.ಕೆ ರವಿ ಕೃತಿ ಲೋಕಾರೆ್ಣ
ಕೊಪ್ಪಳ 26: ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ ಕೆ ರವಿ ರವರು ರಚಿಸಿರುವ ಮಾಡ್ರನ್ ಮೀಡಿಯಾ, ಎಲೆಕ್ಷನ್ಸ ಅಂಡ್ ಡೆಮಾಕ್ರಸಿ ಪುಸ್ತಕವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಮಾಧ್ಯಮವು ಸಮಾಜದ ನಾಲ್ಕನೇ ಬಹು ಮುಖ್ಯ ಅಂಗವಾಗಿದ್ದು, ಪ್ರಜಾಪ್ರಭುತ್ವದ ಅರಿವನ್ನು ಜನರಿಗೆ ಮೂಡಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ . ಈ ನಿಟ್ಟಿನಲ್ಲಿ ಬಿಕೆ ರವಿ ರವರ ಈ ಕೃತಿಯು ಚುನಾವಣೆಗಳು ಘೋಷಣೆಯಾದ ಸಂಕೀರ್ಣ ಸಂದರ್ಭಗಳಲ್ಲಿ ಜನರ ಅಭಿಪ್ರಾಯಗಳನ್ನು ಬಿಂಬಿಸುವುದರ ಜೊತೆಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಗುರುತರ ಜವಾಬ್ದಾರಿಯನ್ನ ನಿಷ್ಪಕ್ಷಪಾತವಾಗಿ ಮಾಧ್ಯಮಗಳು ನಿರ್ವಹಿಸಬೇಕಾದ ಅಗತ್ಯತೆಯ ಕುರಿತು ಹಾಗೂ ಪ್ರಜಾಪ್ರಭುತ್ವವು ರಾಜಕೀಯ ಬಹುತ್ವದ ಕಡೆಗೆ ಸಾಗಬೇಕಾದ ಅನಿವಾರ್ಯತೆಯ ಬಗ್ಗೆ ಬೆಳಕು ಚೆಲ್ಲುತ್ತದೆ.ಇದು ಮಾಧ್ಯಮ ಕ್ಷೇತ್ರಕ್ಕೆ ಬಹು ಮುಖ್ಯ ಆಕರ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.