ಏ.14 ರಂದು ಡಾ. ಬಿ.ಆರ್‌. ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ: ತಹಶಿಲ್ದಾರ ರಾಜೇಶ್ ಬುರ್ಲಿ ಮಾಹಿತಿ

Dr. B.R. Ambedkar Jayanti to be celebrated grandly on April 14: Tahsildar Rajesh Burli information

ಏ.14 ರಂದು ಡಾ. ಬಿ.ಆರ್‌. ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ: ತಹಶಿಲ್ದಾರ ರಾಜೇಶ್ ಬುರ್ಲಿ ಮಾಹಿತಿ 

ಕಾಗವಾಡ, 27;  ತಾಲೂಕಿನಾದ್ಯಂತ ಬರುವ ಏಪ್ರೀಲ್ 14 ರಂದು ಡಾ. ಬಿ.ಆರ್‌.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವದೆಂದು ತಹಶಿಲ್ದಾರ ರಾಜೇಶ್ ಬುರ್ಲಿ ತಿಳಿಸಿದ್ದಾರೆ. 

ಅವರು ಬುಧವಾರ ದಿ. 25 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್‌. ಅಂಬೇಡ್ಕರ್ ಜಯಂತಿ ನಿಮಿತ್ಯದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿ ವರ್ಷಕ್ಕಿಂತ ಈ ಬಾರಿ ಡಾ.ಬಿ.ಆರ್‌. ಅಂಬೇಡ್ಕರ್ ಜಯಂತಿಯನ್ನು ತಾಲೂಕಾಡಳಿತದಿಂದ ಅತೀ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆ ಮಾಡಿ ಕೊಳ್ಳಲಾಗುತ್ತದೆ. ಆ ದಿನ ಶಾಸಕ ರಾಜು ಕಾಗೆಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ, ಡಾ. ಬಿ.ಆರ್‌. ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡುವಂತ ವಿಚಾರ ಧಾರೆಯುಳ್ಳ ಉಪನ್ಯಾಸಕರನ್ನು ಕರೆಸಲಾಗುವದು. ಅದರ ಜೊತೆಗೆ ಶಾಲಾ ಮಕ್ಕಳಿಂದ ಪ್ರಬಂಧ, ಭಾಷಣ, ರಂಗೋಲಿ ಸ್ಪರ್ಧೆಗಳನ್ನು ಏರಿ​‍್ಡಸಲಾಗುವದು ಎಂದರು. 

ಈ ವೇಳೆ ದಲಿತ ಮುಖಂಡರು ಮಾತನಾಡಿ, ಈ ವರ್ಷ ನಾವೆಲ್ಲ ಸೇರಿಕೊಂಡು ಅಂಬೇಡ್ಕರರ ಜಯಂತಿಯನ್ನು ಅದ್ದೂರಿ ಆಚರಣೆ ಮಾಡುವವರಿದ್ದು, ನಮಗೆ ಮೆರವಣಿಯಲ್ಲಿ ಡಾಲ್ಬಿ ಸೌಂಡ್ ಸಿಸ್ಟಮ್ ಹಚ್ಚಲು ಒಕ್ಕೊರಲ ಅಭಿಪ್ರಾಯವಿದ್ದು ಈ ಸಂಭಂಧ ನಮಗೆ ಯಾವುದೇ ರೀತಿಯ ಅಡ್ಡಿ ಬರಲಾರದೇ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. 

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಹಾಗೂ ಮೆರವಣಿಗೆಯಲ್ಲಿ ಕಡ್ಡಾಯವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಭಾಗವಹಿಸಲು ಸಿಡಿಪಿಒ ಸಂಜಯಕುಮಾರ ಅವರಿಗೆ ಕೇಳಿಕೊಂಡಾಗ ಎಲ್ಲರೂ ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸುವದಾಗಿ ಹೇಳಿದರು. 

ಇದೇ ವೇಳೆ ದಲಿತ ಸಂಘಟನೆಗಳ ಒಕ್ಕೂಟದಿಂದ ತಾಲೂಕಾಡಳಿತ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐದು ಸಾವಿರ ಬಹುಮಾನ ನೀಡಲಾಗುವದು ಎಂದು ಹೇಳಿದರು.  

ಈ ವೇಳೆ ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಗ್ರೇಡ-2 ತಹಶಿಲ್ದಾರ ರಶ್ಮಿ ಜಕಾತಿ, ಉಪತಹಶಿಲ್ದಾರ ಅಣ್ಣಾಸಾಬ ಕೋರೆ, ಎಂ.ಆರ್‌. ಪಾಟೀಲ್, ಅಪರಾಧ ವಿಭಾಗದ ಪಿಎಸ್‌ಐ ಬಿ.ಎಸ್‌. ಬಿರಾದಾರ, ದಲಿತ ಮುಖಂಡರಾದ ಸಂಜಯ ತಳವಲಕತ, ಪ್ರಕಾಶ ಧೊಂಡಾರೆ, ಬಾಳಾಸಾಬ ಕಾಂಬಳೆ, ವಿವೇಕ ಕರ​‍್ೆ, ಸಚೀನ್ ಪೂಜಾರಿ, ಉಮೇಶ ಮನೋಜ, ಶಶಿಕಾಂತ ನಡೋಣಿ, ವಿಧ್ಯಾಧರ ಧೊಂಡಾರೆ, ಅಶೋಕ ಕಾಂಬಳೆ, ಅನೀಲ ಚೌವ್ಹಾನ, ದೀಪಕ ಕಾಂಬಳೆ, ವೆಂಕಟೇಶ ಕಾಂಬಳೆ, ಅಮೀತ ದಿಕ್ಷಾಂತ, ಮಹಾಂತೇಶ ಬಡಿಗೇರ, ಉದಯ ಖೋಡೆ, ಪಿಂಟು ಕಾಂಬಳೆ, ಸಚಿನ್ ಕಾಂಬಳೆ, ಮೀರಾಸಾಬ ಕಾಂಬಳೆ ಸೇರಿದಂತೆ ದಲಿತ ಮುಖಂಡರ ಉಪಸ್ಥಿತರಿದ್ದರು.