ರೈತರ ಸಮಸ್ಯೆಗೆ ಸ್ಪಂದಿಸಿದ ಡಾ.ಬಿ.ಕೆ.ದೇಸಾಯಿ
ಬಳ್ಳಾರಿ 31: ತಾಲೂಕಿನ ಸಿಡಿಗಿನಮೊಳ ಗ್ರಾಮದ ಬಳಿ ಇರುವ ಕೈಗಾರಿಕೆಯಿಂದ ಆಗುತ್ತಿರುವ ಪರಿಸರ ನಾಶ ಹಾಗೂ ರೈತರ ಸಂಕಷ್ಟ ಸ್ಥಿತಿಗತಿಗಳ ಕುರಿತು ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕರಿಗೆ ಮನವರಿಕೆ ಮಾಡಿಕೊಟ್ಟಾಗ ಅಧಿಕಾರಿಗಳಾದ ಡಾ.ಬಿ.ಕೆ.ದೇಸಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಚೆನ್ನ ದಾಸರ್, ಹೊಲೆಯ ದಾಸರ, ಮಾಲಾ ದಾಸರ ಜನಸೇವಾ ಸಮಿತಿ ಮತ್ತು ಜಿಲ್ಲಾ ರೈತ ಹಾಗೂ ಗ್ರಾಮಾಭಿವೃದ್ಧಿ ಮತ್ತು ಪರಿಸರ ರಕ್ಷಣ ಸಮಿತಿ, ಚೆ.ಹೊ.ಮಾ.ಜನ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಡಿ. ರಂಗಯ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಕೈಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳು, ಜನ-ಜಾನುವಾರುಗಳು ಪರದಾಡುತ್ತಿರುವ ಸ್ಥಿತಿಗತಿಯ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಯಚೂರು ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದಶಕ ಡಾ.ಬಿ .ಕೆ. ದೇಸಾಯಿ ಕೂಡಲೇ ಒಂದು ತಂಡವನ್ನು ಕಳುಹಿಸಿ, ಸಮಗ್ರ ವರದಿ ಸಿದ್ಧಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ. ರಾಮಯ್ಯ ರೈತ ಮುಖಂಡರಾಗಳಾದ ಜಿಲ್ಲಾ ಉಪಾಧ್ಯಕ್ಷ ಲಿಂಗಯ್ಯ ಸ್ವಾಮಿ, ರೈತ ಸಂಘದ ಸದಸ್ಯರುಗಳಾದ ರಾಜಶೇಖರ್ ಗೌಡ, ಲಕ್ಷ್ಮಣಗೌಡ, ಸಿ ರಾಮಯ್ಯ, ಮಂಜುನಾಥಗೌಡ, ರಾಯಚೂರು ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಅಧ್ಯಕ್ಷ ರಂಗಮುನಿದಾಸ್, ರಾಯಚೂರು ರೈತ ಮುಖಂಡರಾದ ಮಲೇಶ್ ನಾಯ್ಕ, ಡಿ.ರಾಗಪ್ಪ ಮನವಿ ಸಲ್ಲಿಸಿ ರೈತರ ಸಮಸ್ಯೆಗಳನ್ನು ಚರ್ಚಿಸಿದರು.