ಕೈಗಾ ಅಣು ವಿದ್ಯುತ್ ಘಟಕಗಳ ಕಾಂಕ್ರೀಟೀಕರಣಕ್ಕೆ ಡಾ.ಅಜಿತ್ ಕುಮಾರ್ ಚಾಲನೆ

ಕೈಗಾ ಅಣು ವಿದ್ಯುತ್ ಘಟಕಗಳ ಕಾಂಕ್ರೀಟೀಕರಣಕ್ಕೆ ಡಾ.ಅಜಿತ್ ಕುಮಾರ್ ಚಾಲನೆ  Dr. Ajith Kumar launches concretization of Kaiga Nuclear Power Units

ಕಾರವಾರ 01 : ದೇಶದ ಪ್ರಮುಖ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 21 ಸಾವಿರ ಕೋಟಿ ವೆಚ್ಚದಲ್ಲಿನ 5 ಮತ್ತು 6 ನೇ ಅಣು ವಿದ್ಯುತ್ ಘಟಕಗಳ ನೆಲ ಮಹಡಿ ಕಾಂಕ್ರೀಟೀಕರಣಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ  ಡಾ.ಅಜಿತ್ ಕುಮಾರ್ ಮೊಹಂತಿ ಚಾಲನೆ ನೀಡಿದರು. ಕಾರವಾರ ತಾಲೂಕಿನ ಕೈಗಾದಲ್ಲಿ 1999 ರಲ್ಲಿ ಕೈಗಾ ಅಣು ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭಗೊಂಡಿತ್ತು. ಪ್ರಸ್ತುತ 220 ಮೆಗಾವ್ಯಾಟ್ ಸಾಮರ್ಥ್ಯದ4 ಅಣು ಘಟಕಗಳು ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ಈ ನಾಲ್ಕು ಘಟಕದಿಂದ 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿದೆ. ವಿದ್ಯುತ್ ಉತ್ಪಾದನೆ ಬೇಡಿಕೆ ಹಿನ್ನಲೆಯಲ್ಲಿ  ತಲಾ 700 ಮ್ಯಾಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದ ಘಟಕಗಳ ಸ್ಥಾಪನೆಗೆ  2025 ರಲ್ಲಿ 5 ಮತ್ತು 6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಇಂದು ಈ ಘಟಕಗಳ ನೆಲ ಮಹಡಿ ಕಾಂಕ್ರೀಟೀಕರಣಕ್ಕೆ  ಅಣುಶಕ್ತಿ ಆಯೋಗದ ಅಧ್ಯಕ್ಷ  ಹಾಗೂ  ಅಟಾಮಿಕ್ ಎನರ್ಜಿ ಕಮಿಷನನ ಕಾರ್ಯದರ್ಶಿ ಅಜಿತ್ ಕುಮಾರ್ ಮೊಹಂತಿ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಎನ್‌.ಪಿ.ಸಿ. ಎಲ್‌. ಕೈಗಾ ಅಣುಸ್ಥಾವರದ ಸೈಟ್ ಡೈರೆಕ್ಟರ್ ಬಿ.ವಿನೋದ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. 5-6 ನೇ ಅಣು  ಘಟಕಗಳು 2030 ರ ವೇಳೆಗೆ  ನಿರ್ಮಾಣ ಕಾಮಗಾರಿ ಮುಗಿದು ,ವಿದ್ಯುತ್ ಉತ್ಪಾದನೆಯ ಗುರಿ ಹೊಂದಿವೆ ಎಂದು ಎನ್‌ಪಿಸಿ ಎಲ್ ಚೇರಮನ್  ಭುವನ್ ಚಂದ್ರ ಪಾಠಕ್ ಹೇಳಿದರು.  ಕೈಗಾ ಅಣುಸ್ಥಾವರ ಸ್ಥಳ ನಿರ್ದೇಶಕ ಬಿ. ನೋದ್ ಕುಮಾರ್ ಹಾಗೂ ಕೈಗಾ 5 ಮತ್ತು 6 ರ  ಘಟಕದ ನಿರ್ದೇಶಕ ಕುಲಕರ್ಣಿ ಹಾಗೂ ಹಿರಿಯ ಎಂಜಿನಿಯರಿಂಗ್ ಸಿಬ್ಬಂದಿ ಅಣುಸ್ಥಾವರ ತಾಂತ್ರಿಕ  ಸಿಬ್ಬಂದಿ   ಇದ್ದರು.