ಒಂದೇ ದಿನ ದಾಖಲೆಯ 7.60 ಕೋಟಿ ರೂ. ವೆಚ್ಚದಲ್ಲಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಒಂದೇ ದಿನ ದಾಖಲೆಯ 7.60 ಕೋಟಿ ರೂ. ವೆಚ್ಚದಲ್ಲಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ Dozens of development works launched at a record cost of Rs 7.60 crore in a single day

       ಹಾನಗಲ್ 11 :ಸ್ಥಳೀಯ ಪುರಸಭೆಯ ಹಲವು ವಾರ್ಡ್‌ಗಳಲ್ಲಿ 2025-26 ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಒಟ್ಟು 7.60 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

  ವಾರ್ಡ್‌ ನಂ 4, 5, 7, 8, 12, 13, 14, 18, 19 ಸೇರಿದಂತೆ ಹಲವೆಡೆ ಸಿಸಿ ರಸ್ತೆ, ಸಿಡಿ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಿದ ಶಾಸಕ ಮಾನೆ, ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿ ಒಂದೇ ದಿನ ದಾಖಲೆಯ 7.60 ಕೋಟಿ ರೂ. ವೆಚ್ಚದಲ್ಲಿ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸುಮಾರು 40 ಕೋಟಿ ರೂ.ಗಿಂತ ಹೆಚ್ಚು ಅನುದಾನ ದೊರಕಿಸಿ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು. 

       ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ರಾಧಿಕಾ ದೇಶಪಾಂಡೆ, ಮಮತಾ ಆರೆಗೊಪ್ಪ, ಖುರ್ಷಿದ್ ಹುಲ್ಲತ್ತಿ, ಪರಶುರಾಮ ಖಂಡೂನವರ, ನಾಗಪ್ಪ ಸವದತ್ತಿ, ಮಾಜಿ ಉಪಾಧ್ಯಕ್ಷೆ ವೀಣಾ ಗುಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಆದರ್ಶ ಶೆಟ್ಟಿ, ಎಂ.ಎಂ.ಬಡಗಿ, ಮೋಹನ ಬಸವಂತಕರ, ಘನಶ್ಯಾಮ ದೇಶಪಾಂಡೆ, ರವಿ ದೇಶಪಾಂಡೆ, ರಾಜೂ ಗುಡಿ, ಗನಿ ಪಾಳಾ, ಇರ್ಫಾನ್ ಮಿಠಾಯಿಗಾರ, ಈರಣ್ಣ ಬೈಲವಾಳ, ಸಿಕಂದರ್ ವಾಲಿಕಾರ, ರಾಜಕುಮಾರ ಶಿರಪಂಥಿ, ಖಂಡೋಜಿ ಬೋಸ್ಲೆ, ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ, ಅಭಿಯಂತರ ನಾಗರಾಜ ಮಿರ್ಜಿ, ತಮ್ಮಣ್ಣ ಆರೆಗೊಪ್ಪ, ವಿನಯ ಬಂಕನಾಳ ಸೇರಿದಂತೆ ಇನ್ನೂ ಹಲವರು ಇದ್ದರು.