ಮಾಜಿ ಸೈನಿಕರ ಸಂಘದಿಂದ ಶಾಲೆಗೆ ಪಾತ್ರೆ ದೇಣಿಗೆ
ನೇಸರಗಿ 05: ಸಮೀಪದ ವಣ್ಣೂರ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ಸುಮಾರು 15 ಸಾವಿರ ಮೌಲ್ಯದ ಅನ್ನ ಮಾಡುವ ಪಾತ್ರೆಯನ್ನು ಗ್ರಾಮದ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರವಿ ಗೌಡ ಪಾಟೀಲ್, ಸದಸ್ಯರು,ಪ್ರಧಾನ ಗುರುಗಳಾದ ಆರ್ .ಎಫ್. ಜಂಜನ್ನವರ ಹಾಗೂ ಸಿಬ್ಬಂದಿ ವರ್ಗದವರು ಸೇರಿ ನಿವೃತ್ತ ಸೈನಿಕರನ್ನು ಸನ್ಮಾನಿಸಿದರು.