ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಗೋಶಾಲೆಗೆ ಉಚಿತವಾಗಿ ಹುಲ್ಲು ದಾನ
ಬಳ್ಳಾರಿ 22: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆಯ ಡಾಽಽ.ನಾಗರಾಜ ರಾವ್, ಕೋ-ಚೇರೆ್ಮನ್ ಆರೋಗ್ಯ ಉಪ ಸಮಿತಿ ಇವರು ಬಳ್ಳಾರಿ ನಗರದ ಗೋಶಾಲೆಗೆ ಉಚಿತವಾಗಿ ಒಂದು ಟ್ರಾಕ್ಟರ್ ಹುಲ್ಲು ದಾನ ಮಾಡಿರುತ್ತಾರೆ. ಇವರು ತಮ್ಮ ವಲದಿಂದ ಪ್ರತಿ ವರ್ಷ ಈ ಗೋಶಾಲೆಗೆ ಹುಲ್ಲು ದಾನ ಮಾಡುವ ಮೂಲಕ ಈ ವರ್ಷಕೂಡ ಹುಲ್ಲು ದಾನ ಮಾಡಿ ಗೋಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾಽ.ನಾಗರಾಜ್ ರಾವ್, ಕೋ-ಚೇರೆ್ಮನ್ ಆರೋಗ್ಯ ಉಪ ಸಮಿತಿ, ರೆಡ್ ಕ್ರಾಸ್ ಸಂಸ್ಥೆ. ಬಿ.ದೇವಣ್ಣ, ಕೋ-ಚೇರೆ್ಮನ್ ರಕ್ತದಾನ ಉಪ ಸಮಿತಿ. ಸತೀಶ್, ರೆಡ್ ಕ್ರಾಸ್ ಸದಸ್ಯರು ಮತ್ತು ಕಛೇರಿ ಸಿಬ್ಬಂದಿಗಳಾದ.ಎಂ.ವಲಿ ಬಾಷಾ ಇವರು ಉಪಸ್ಥಿತರಿದ್ದರು.