ಮತವನ್ನು ಮಾರಿಕೊಳ್ಳದೆ ದಾನ ಮಾಡಿ: ನ್ಯಾ.ಸುನೀಲ ಕುಮಾರ
ಇಂಡಿ 25: ತಾಲೂಕ ಆಡಳಿತ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಇಂಡಿ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವು ತಾಲೂಕ ಆಡಳಿತ ಭವನದಲ್ಲಿ ಜರುಗಿತು.
ಎಲ್ಲ ಅಧಿಕಾರಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿವಾಣಿ ನ್ಯಾಯಧೀಶ ಸುನೀಲಕುಮಾರ ಎಂ ಎಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪಾಲ್ಗೊಂಡ ಎಲ್ಲ ಅಧಿಕಾರಿಗಳಿಗೆ, ಪ್ರತಿಯೊಬ್ಬ ನಾಗರಿಕರು, ವಿದ್ಯಾರ್ಥಿಗಳು ಮತವನ್ನು ದಾನ ಮಾಡಬೇಕು. ನಾವು ಯಾವುದೇ ಹಣಕಾಸಿಗೆ, ಆಮಿಷಕ್ಕೆ ಒಳಗಾಗದೇ ನಿಮ್ಮ ಮತ ಮಾರದೆ ನಿಷ್ಟಾವಂತ, ಪ್ರಾಮಾಣಿಕರಿಗೆ ನಿಮ್ಮ ಮತ ಹಾಕಿ. ಜಾತಿ, ಧರ್ಮ, ಸಂಬಂಧ ನೋಡದೆ ದೇಶದ ಅಭಿವೃದ್ಧಿಗೆ ಉತ್ತಮರನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಮತದಾನ ಮಾಡುವುದು ನಮ್ಮ ಹಕ್ಕು, ಯಾವುದೇ ಆಮಿಷಕ್ಕೆ ಒಳಗಾಗಬೇಡಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಹಾಗೂ ತಾಲೂಕಾಡಳಿತ ಸಿಬ್ಬಂದಿಗಳಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಾರ್ಷಿಕ ಅತ್ಯುತ್ತಮ ಃಐಓ ಗಳಿಗೆ ಸಭೆಯಲ್ಲಿ ಸನ್ಮಾನಿಸಿ, ಪ್ರಮಾಣ ಪತ್ರ ನೀಡಿ ವೇದಿಕೆ ಮೇಲಿನ ಎಲ್ಲಾ ಅಧಿಕಾರಿಗಳು ಗೌರವಿಸಿದರು. ಅದೇ ರೀತಿ ಮತದಾನ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರಿ್ಡಸಿದ್ದ ಪ್ರಭಂದ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆ ಮೇಲೆ ಗೌರವಾನ್ವಿತ ದಿವಾಣಿ ನ್ಯಾಯಾಧೀಶರು ಮತ್ತು ಸಧ್ಯಸ್ಯ ಕಾರ್ಯದರ್ಶಿಗಳು ತಾಲೂಕ ಕಾನೂನು ಸೇವೆಗಳ ಸಮಿತಿ ಇಂಡಿ ಸುನೀಲ ಕುಮಾರ ಎಂ ಎಸ್, ಹಾಗೂ ವಕೀಲ ಸಂಘದ ಕಾರ್ಯದರ್ಶಿ ಎನ್ ಕೆ ನಾಡಪುರೋಹಿತ, ಇಂಡಿ ಉಪವಿಭಾಗಾಧಿಕಾರಿ ಅಭಿದ ಗದ್ಯಾಳ, ಇಂಡಿ ತಹಸೀಲ್ದಾರರು ಎಸ್ ಬಿ ಕಡಭಾವಿ, ಇಂಡಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಸ್ವೀಪ್ ಸಮಿತಿಯ ಅಧ್ಯಕ್ಷರು ನಂದಿಪ ರಾಠೋಡ, ಹಾಗೂ ಜಿಲ್ಲಾ ಪಂಚಾಯತಿ ಸಾಹಯಕ ನಿರ್ದೇಶಕ ಎಸ್ ಎಂ ರುದ್ರವಾಡಿ ಇದ್ದರು. ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಃಐಓ ಗಳು ತಾಲೂಕ ಆಡಳಿತ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.