ರಕ್ತ ದಾನ ಮಾಡಿ ಜೀವ ಉಳಿಸುವ ಪುಣ್ಯ ಗಳಿಸಿಕೊಳ್ಳಿ-ಉಮಾತಂಬ್ರಳ್ಳಿ
ಕೊಪ್ಪಳ 20 : ರಕ್ತದಾನ ದಿಂದ ಒಂದು ಜೀವ ಉಳಿಸುವಂತಹ ಪುಣ್ಯ ಸಿಗುತ್ತದೆ ಅದಕ್ಕೆ ಪ್ರತಿಯೊಬ್ಬ ಯುವಕರು ರಕ್ತಧಾನ ಮಾಡಿ ಜೀವ ಉಳಿಸುವಂತಹ ಕೆಲಸ ಮಾಡಿ ಪುಣ್ಯ ಗಳಿಸಿಕೊಳ್ಳಬೇಕೆಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅಭಿಪ್ರಾಯಪಟ್ಟರು,ಅವರು ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ ಆವರಣದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮತ್ತು ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಯುಕ್ತ ಆಶ್ರಯದಲ್ಲಿ ಏರಿ್ಡಸಿದ ರಕ್ತದಾನ ಶಿಬಿರ ದಲ್ಲಿ ಪಾಲ್ಗೊಂಡು ಸರಳ ಸಾಂಕೇತಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಂದುವರಿದ ಮಾತನಾಡಿ ಅನ್ನದಾನ ಅಕ್ಷರ ದಾನ ನೇತ್ರದಾನ ದಂತೆಯೆ ರಕ್ತದಾನ ಕೂಡ ಅತ್ಯಂತ ಶ್ರೇಷ್ಠ ದಾನ ವಾಗಿದೆ ಇದರಿಂದ ಒಂದು ಜೀವ ಒಂದು ಕುಟುಂಬ ಉಳಿಸುವಂತಹ ಪುಣ್ಯ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬ ಆರೋಗ್ಯವಂತ ಯುವಕರು ರಕ್ತದಾನ ಮಾಡುವುದರ ಮೂಲಕ ಪುಣ್ಯ ಗಳಿಸಿಕೊಳ್ಳಬೇಕು ಮತ್ತು ಒಂದು ಜೀವ ಉಳಿಸಲು ಸಹಕಾರಿ ಯಾಗಬೇಕು ಎಂದ ಅವರು ಇಂದಿನ ರಕ್ತದಾನ ಶಿಬಿರ ದಲ್ಲಿ ನಮ್ಮ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರ ಮಕ್ಕಳು ಸಹ ಭಾಗಿಯಾಗಿ ರಕ್ತದಾನ ನೀಡಲು ಮುಂದೆ ಬಂದಿರುವುದು ನಮ್ಮೆಲ್ಲರಿಗೆ ಹೆಮ್ಮೆ ಮತ್ತು ಸಂತಸ ಉಂಟು ಮಾಡಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು,ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕ್ಲಬ್ಬಿನ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಉಪಾಧ್ಯಕ್ಷರಾದ ಮಧು ಶೆಟ್ಟರ್, ಖಜಾಂಚಿ ಆಶಾ ಕವಲೂರ್, ಐ ಎಸ್ ಓ ಮಧು ನಿಲೋಗಲ್, ಸಂಪಾದಕರಾದ ನಾಗವೇಣಿ ,ಕಾರ್ಯಕಾರಿ ಸಮಿತಿ ಸದಸ್ಯರಾದ ಪಾರ್ವತಿ ಪಾಟೀಲ್, ನಿತಾ ತಂಬ್ರಳ್ಳಿ , ಪದ್ಮ ಜೈನ್, ಮಾಜಿ ಅಧ್ಯಕ್ಷರಾದ ಸುಧಾ ಶೆಟ್ಟರ್ , ಸದಸ್ಯರಾದ ಲತಾ ಉಲ್ಲತಿ ಕವಿತಾ ಶೆಟ್ಟರ್ ಸುವರ್ಣ ಶೆಟ್ಟರ್, ಲತಾ ಪಟ್ಟಣಶೆಟ್ಟಿ ,ಲಕ್ಷ್ಮಿ ಪಾಟೀಲ್, ಪದ್ಮ ವಿಠಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.