ದೇಣಿಗೆ ನೀಡಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ: ಚೌಗಲಾ

ಲೋಕದರ್ಶನ ವರದಿ

ಬೆಳಗಾವಿ 21:  ಇಂದಿನ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸಂಬಂಧಗಳು ಕೃತಕವಾಗುತ್ತಿವೆ ಹಿಂದಿನ ಕಾಲದ ಕುಟುಂಬ ವ್ಯವಸ್ಥೆ ಹಾಗೂ ಕುಟುಂಬದಲ್ಲಿನ ಪ್ರೀತಿ ವಾತ್ಸಲ್ಯಗಳು ನಶಿಸುತ್ತಾ ಸಾಗಿ ಸಮಾಜದಲ್ಲಿ ಮಕ್ಕಳು ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಷಾದನೀಯ. ಮಕ್ಕಳಿಗೆ ಸಮೃದ್ಧಿ ಪಡೆದುಕೊಳ್ಳುವದಕ್ಕಿಂತ ಸಂತೃಪ್ತಿ ಹೇಗೆ ಪಡೆದುಕೊಳ್ಳಬೇಕೆಂಬುದನ್ನು ಕಲಿಸುವ ಅಗತ್ಯತೆ ಇದೆ. ಸಮಾಜದಲ್ಲಿ ಉಳ್ಳವರು ದೇಣಿಗೆ ನೀಡಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ವೃದ್ಧಾಶ್ರಮದ ಸಂಯೋಜಕ ಎಂ ಎಸ್ ಚೌಗಲಾ ಅಭಿಪ್ರಾಯಪಟ್ಟರು. 

ಬೈಲಹೊಂಗಲದ ಕಲ್ಪವೃಕ್ಷ ಮಾದರಿ ಶಾಲೆಯ ವಿದ್ಯಾಥರ್ಿಗಳು ಅಕ್ಕಿ ಹಾಗೂ ಬಟ್ಟೆಯನ್ನು ಸಂಗ್ರಹಿಸಿ ಬೆಳಗಾವಿಯ ದೇವರಾಜ ಅರಸ ಬಡಾವಣೆಯ ನಾಗನೂರು ಶಿವಬಸವೇಶ್ವರ ಟ್ರಸ್ಟಿನ ಚಿನ್ನಮ್ಮಾ ಬ ಹಿರೇಮಠ ವೃದ್ಧಾಶ್ರಮದ ವೃದ್ಧರಿಗಾಗಿ ಬಟ್ಟೆ, ಅಕ್ಕಿ ದೇಣಿಗೆಯಾಗಿ ನೀಡಿದರು. 

ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಮಲ್ಲಿಕಾಜರ್ುನ ಹಿರೇಮಠ ಮಾತನಾಡಿ ಹಿರಿಯ ನಾಗರಿಕ ವಯೋವೃದ್ಧರನ್ನು ಮಕ್ಕಳ ರೀತಿಯಲ್ಲಿ ಪಾಲನೆ ಪೋಷಣೆ ಮಾಡಿ ಆರೋಗ್ಯಯುತ ಮುಸ್ಸಂಜೆ ಬದುಕು ಸಾಗಿಸಲು ಅವರಿಗೆ ವಾತ್ಸಲ್ಯ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳಾದ ರತ್ನಾ ಪಾಟೀಲ, ಹೇಮಂತ ಅರವಟಿಗೆಮಠ, ಸುದಿಂದ್ರ ಹುಲಕೊಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಎಲ್ಲಾ ವಿದ್ಯಾಥರ್ಿಗಳು ಹಿರಿಯ ನಾಗರಿಕರೊಂದಿಗೆ ಕುಶಲೋಪರಿ ನಡೆಸಿ ಸಾಂತ್ವನದ ನುಡಿಗಳನ್ನಾಡುದರು ಹಾಗೂ ವೃದ್ಧಾಶ್ರಮದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.