ಲಂಬಾಣಿ ಸಮುದಾಯ ’ದುಶ್ಚಟಕ್ಕೆ ಬಲಿಯಾಗಬೇಡಿ
ಹೂವಿನಹಡಗಲಿ 16 : ಸಂತ ಸೇವಾಲಾಲ್ ಅವರು ಲಂಬಾಣಿ ಸಮುದಾಯವನ್ನುದುಶ್ಚಟಮುಕ್ತಗೊಳಿಸುವ ಚಿಂತನೆ ಹೊಂದಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಂತರಿಗೆ ಗೌರವ ತರಬೇಕು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.’ಸತ್ಯ, ನಿಷ್ಠೆ, ಜ್ಞಾನದ ಸಂಕೇತವಾಗಿದ್ದ ಸೇವಾಲಾಲ್ ತಮ್ಮ ನಡೆ, ನುಡಿಯಿಂದ ಧಾರ್ಮಿಕ, ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಈ ಸಂತನನ್ನು ಜಾತಿಗೆ ಸೀಮತಗೊಳಿಸದೇ ಎಲ್ಲ ಸಮುದಾಯದವರು ಗೌರವಿಸುವಂತಾಗಬೇ-ಕು’ ಎಂದರು.ತಾ.ಪಂ. ಇಒ ಎಂ. ಉಮೇಶ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ವಾರದ ಗೌಸ್ ಮೊಹಿದ್ದೀನ್, ಬಿ. ತೋಟನಾಯ್ಕ, ಎಲ್. ಸೋಮಿನಾಯ್ಕ, ಎನ್.ಶ್ರೀಧರನಾಯ್ಕ, ಡಾ.ಲಕ್ಷ್ಮಣನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಎನ್. ಕೋಟೆಪ್ಪ, ಹಣ್ಣಿ ಶಶಿಧರ, ಸಿರಾಜ್ ಬಾವಿಹಳ್ಳಿ, ಚಂದ್ರನಾಯ್ಕ, ಮೀರಾಬಾಯಿ, ಪುಷ್ಪಾ ಉಪಸ್ಥಿತರಿದ್ದರು.