ಮಾಹಿತಿ ಹಕ್ಕು ಅಧಿನಿಯಮದ ಭಯ ಬೇಡ : ಪಿ. ವಾಗೀಶ್‌

Don't be afraid of Right to Information Act: P. Wagish

ಮಾಹಿತಿ ಹಕ್ಕು ಅಧಿನಿಯಮದ ಭಯ ಬೇಡ : ಪಿ. ವಾಗೀಶ್‌

ಹೂವಿನ ಹಡಗಲಿ 16: ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಬಗ್ಗೆ ಯಾವುದೇ ಭಯವಿಲ್ಲದೆ ಸಕಾಲದಲ್ಲಿ ಸೂಕ್ತ ಮಾಹಿತಿ ನೀಡಿರಿ ಎಂದು ಮಾಹಿತಿ ಹಕ್ಕು ರಾಜ್ಯ ಸಂಪನ್ಮೂಲ ವ್ಯಕ್ತಿ ಎ ಎಂ ಪಿ ವಾಗೀಶ್ ತಿಳಿಸಿದರು.ಪಟ್ಟಣದ ಕಾರ್ಮೆಲ್ ಸೇವಾ ಸದನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘ, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಗುರುಗಳ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ಸುತ್ತೋಲೆ ಸರ್ಕಾರದ ಆದೇಶಗಳನ್ನು ಮುಖ್ಯ ಗುರುಗಳು ಸರಿಯಾಗಿ ಓದಬೇಕು. ಕೇಳಿದ ಮಾಹಿತಿಗೆ ಸಮರ​‍್ಕವಾಗಿ ಉತ್ತರ ನೀಡಬೇಕು ಎಂದರು.ಪ್ರತಿ ಸರ್ಕಾರಿ ಶಾಲೆಗಳಲ್ಲಿ ನಗದು ಘೋಷಣೆ ವಹಿ ನಿರ್ವಹಿಸಬೇಕು. ದಾಖಲೆಗಳ ಪುಸ್ತಕಗಳಲ್ಲಿ ಪ್ರತಿ ಪುಟಕ್ಕೆ ದೃಢೀಕರಣ ಮಾಡಿ ಸಹಿ ಹಾಕಿಬೇಕು ಎಂದು ತಿಳಿಸಿದರು.ಅಕ್ಷರ ದಾಸೋಹ ಮಸಾಲ ಪದಾರ್ಥಗಳು, ಮೊಟ್ಟೆ ಬಾಳೇಹಣ್ಣು ತರಕಾರಿ ಖರೀದಿಸಿದ ಮೊತ್ತಕ್ಕೆ ಸರಿಯಾದ ಬಿಲ್ ಪಡೆದು ನಿರ್ವಹಿಸಬೇಕು.ಸರ್ಕಾರಿ ಶಾಲೆಗಳ ಮಕ್ಕಳು ಬಡ ಕುಟುಂಬದ ಹಿನ್ನೆಲೆಯಲ್ಲಿ ದಾಖಲಾದವರು. ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಿರಿ ಎಂದು ಹೇಳಿದರು.ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾದ ಅಯ್ಯನಗೌಡರ ಕೊಟ್ರಗೌಡ ಕಾರ್ಯಾಗಾರ ಉದ್ಘಾಟಿಸಿ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ತಾಲೂಕಿನ ಸರ್ಕಾರಿ ಅನುದಾನಿತ ಶಾಲೆಗಳ ಮುಖ್ಯ ಗುರುಗಳು ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್, ಪ್ರಾಥಮಿಕ ಶಾಲಾ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಡಿ ವಿರುಪಣ್ಣ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಶಿವಲಿಂಗಪ್ಪ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯು ಆನಂದ್ ಕಾರ್ಯದರ್ಶಿ ವಿ ಹೆಚ್ ಯೇಸು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿ ಬಿ ಜಗದೀಶ್ ಇತರರು ಉಪಸ್ಥಿತರಿದ್ದರು.ಇ ಸಿ ಒ ಮಿಟ್ಯಾನಾಯ್ಕ್‌, ಸಿ ಆರ್ ಪಿ ಚನ್ನವೀರನ ಗೌಡ,ಎಂ ಸಿದ್ದೇಶ್ವರ ನಿರ್ವಹಿಸಿದರು.