ವೈದ್ಯರು ಮನಕುಲದ ಮಿತ್ರರು: ಸಿದ್ದೇಶ್ವರ ಶ್ರೀ

ಲೋಕದರ್ಶನ ವರದಿ

ವಿಜಯಪುರ 24: ವೈದ್ಯರು ಮನಕುಲದ ಮಿತ್ರರು, ಜಾತಿ, ಮತ, ಪಂಥ-ಬೇಧವಿಲ್ಲದೆ ಚಿಕಿತ್ಸೆ ನೀಡುವ ಇವರು ಮಾಡುವ ವೃತ್ತಿ ಮಹತ್ತಕಾರ್ಯ ಎಂದು ಜ್ಞಾನಯೋಗಾಶ್ರಮದ  ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳು ಹೇಳಿದರು.

ಬಿಎಲ್ಡಿಇ ಎವಿಎಸ್ ಆಯುವರ್ೆದ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾಥರ್ಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಜಗತ್ತು ಸುಂದರ ಉತ್ಸವ, ಭೂಮಿಯ ಮೇಲೆ ಇರುವ ನಾವು ಈ ಉತ್ಸವವನ್ನು ಅನುಭವಿಸಬೇಕು. ಶರೀರವೆಂಬ ಸುಂದರ ವೀಣೆಯ ತಂತಿಗಳು ಸಡಿಲಾದಂತೆ, ನಮ್ಮ ಶರೀರಕ್ಕೆ ಅನಾರೋಗ್ಯ ಕಾಡುವವು. 

ಆ ತಂತಿಗಳನ್ನು ಸರಿಪಡಿಸಿದಂತೆ ರೋಗಗಳನ್ನು ನಿವಾರಿಸುವ, ಇತರರಿಗೆ ಆರೋಗ್ಯ ಭಾಗ್ಯವನ್ನು ನೀಡುವ ಕೆಲಸ ನಿಮ್ಮದಾಗಿದೆ ಎಂದರು. ಆಯುವರ್ೆದ ರೋಗಿಗಳನ್ನು ಗುಣಪಡಿಸುವದಕ್ಕಿಂತ  ಮುಖ್ಯವಾಗಿ ರೋಗಗಳು ಬರದಂತೆ ತಡೆಯುತ್ತವೆ. ಆಯುವರ್ೆದ ನಮ್ಮ ಜೀವನದ ವಿಧಾನ, ನಿಸರ್ಗದಿಂದ ನಾವು ಕಲಿಯುವದು ಬಹಳಷ್ಟಿದೆ. ನಿಸರ್ಗದಲ್ಲಿರುವ ಪಕ್ಷಿಗಳು ಎಂದೂ ಅನಾರೋಗ್ಯ ಎಂದು ಆಸ್ಪತ್ರೆಗೆ ಬಂದಿಲ್ಲ. ಏಕೆಂದರೆ, ಅವುಗಳದ್ದು ನಿಸರ್ಗದ ಜೀವನ. ಅವುಗಳಿಗೆ ಒತ್ತಡವಿಲ್ಲ. 

ಒತ್ತಡ ರಹಿತ ಜೀವನ ನಮ್ಮದಾಗಬೇಕು. ವೈದ್ಯರು ರೋಗಿಗಳನ್ನು ನೋಡಬೇಕು ಹೊರತಾಗಿ, ಅವರ ಕಿಸೆಯನ್ನಲ್ಲ ಎಂದರು. ಬಿಎಲ್ಡಿಇ ಉಪಾಧ್ಯಕ್ಷ ವಿದ್ಯಾಧರ ನಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಬಿಎಲ್ಡಿಇ ನಿದರ್ೆಶಕ ಸುನೀಲಗೌಡ ಪಾಟೀಲರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಯುಷ್ ಫೇಡರೇಶನ್ ಆಫ್ ಇಂಡಿಯಾ ಕನರ್ಾಟಕ ಘಟಕ ಅಧ್ಯಕ್ಷ ಡಾ. ಮುಗದುಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಬಿಎಲ್ಡಿಇ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ 1955ರಿಂದ ಆಯುವರ್ೆದ ವಿದ್ಯಾಲಯ ನಡೆದು ಬಂದ ದಾರಿಯನ್ನು ವಿವರಿಸಿದರು. ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಕಾಲೇಜು ಮತ್ತು ಆಸ್ಪತ್ರೆಯ ಮುಂದಿನ ಯೋಜನೆಗಳನ್ನು ತಿಳಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ, 500ಕ್ಕೂ ಹೆಚ್ಚು ವೈದ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.