ಪ್ರೊ.ಮಾಲತೇಶ ನಾಗಲಾಪುರಗೆ ಡಾಕ್ಟರೆಟ್ ಪ್ರದಾನ

Doctorate awarded to Prof. Malatesh Nagalpur

ಪ್ರೊ.ಮಾಲತೇಶ ನಾಗಲಾಪುರಗೆ ಡಾಕ್ಟರೆಟ್ ಪ್ರದಾನ 

ಹಾವೇರಿ 10: ಇಲ್ಲಿನ ಗಾಂಧಿಪುರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮಾಲತೇಶ ನಾಗಲಾಪುರ ಅವರಿಗೆ ಕೊಯಿಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯ ಡಾಕ್ಟರೆಟ್ ಪ್ರದಾನ ಮಾಡಿ ಗೌರವಿಸಿದೆ. ಡಾ.ಶಿವಲಿಂಗಪ್ಪ ವಿಭೂತಿ ಅವರ ಮಾರ್ಗದರ್ಶನದಲ್ಲಿ ‘ಪರ್ಫಾಮನ್ಸ್‌ ಇವ್ಯಾಲ್ಯೂವೆಷನ್ ಆಫ್ ರೂರಲ್ ಫೈನಾನ್ಸಿಯಲ್ ಇನ್‌ಸ್ಟಿಟ್ಯೂಷನ್ ವಿತ್ ಸ್ಪೇಷಲ್ ರೆಫರೆನ್ಸ್‌ ಟು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಆಫ್ ಹಾವೇರಿ ಡಿಸ್ಟ್ರೀಕ್ಟ್‌ ಇನ್ ಕರ್ನಾಟಕ’ ವಿಷಯ ಕುರಿತು ಮಹಾಪ್ರಬಂದ ಮಂಡಿಸಿ, ಡಾಕ್ಟರೆಟ್ ಪದವಿಗೆ ಭಾಜನರಾಗಿದ್ದಾರೆ.