ವೈದ್ಯ ಡಾ.ಚಿದಂಬರ ಕುಲಕಣರ್ಿಗೆ ಕನರ್ಾಟಕ ವಿಭೂಷಣ ಪ್ರಶಸ್ತಿ ಪ್ರದಾನ

ಬೈಲಹೊಂಗಲ 26: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್, ಕನರ್ಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನರ್ಾಟಕ ಸರಕಾರ ಇವರುಗಳ ಆಶ್ರಯದಲ್ಲಿ ಮೈಸೂರಿನ ರಂಗಾಚಾರಲು ಪುರಭವನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ 157ನೇ ಜನ್ಮ ದಿನಾಚರಣೆ ನಿಮಿತ್ತ ನಡೆದ ಕಾವೇರಿ ಕನರ್ಾಟಕ ಸಾಂಸ್ಕೃತಿಕ ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಟ್ಟಣದ ಎಲವು, ಕೀಲು ತಜ್ಞ, ಖ್ಯಾತ ವೈದ್ಯ ಡಾ.ಚಿದಂಬರ ಕುಲಕಣರ್ಿ ಅವರಿಗೆ ಕನರ್ಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

        ವನಕಲ್ಲು ಮಠದ ಡಾ.ಬಸವ ರಮಾನಂದ ಸ್ವಾಮಿಗಳು, ಬೆಳಗಾವಿ ಜಿಲ್ಲೆಯ ಕಲ್ಮೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಡಾ.ಡಿ.ಎಸ್.ಅಶ್ವಥ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. 

        ಮಾಜಿ ಶಾಸಕ ಡಾ.ನೆ.ಲ.ನರೇಂದ್ರಬಾಬು, ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ, ಚಲನಚಿತ್ರ ಕಲಾವಿದ ಶಂಕರ ಭಟ್, ಚಿತ್ರನಟಿ ಮೀನಾ, ಸ್ವಾಗತ ಸಮಿತಿ ಅಧ್ಯಕ್ಷ ಎಸ್.ವೆಂಕಟೇಶ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಡಾ.ಎಂ.ತಾಹೀರ್ ಅಲಿ, ಸಂಚಾಲಕ ಕಸ್ತೂರಿ ಚಂದ್ರು ಇದ್ದರು.

ಫೊಟೊ ಕ್ಯಾಪ್ಸನ:ಎಚ್25-ಬಿಎಲ್ಎಚ್1  

ಖ್ಯಾತ ವೈದ್ಯ ಡಾ.ಚಿದಂಬರ ಕುಲಕಣರ್ಿ ಅವರಿಗೆ ಕನರ್ಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.