ಗುರು ಶಿಷ್ಯರಲ್ಲಿ ಭಿನ್ನತೆಯನ್ನು ಕಾಣದಿರಿ: ಡಾ. ಮುರುಘರಾಜೇಂದ್ರ ಶ್ರೀ

ಲೊಕದರ್ಶನ ವರದಿ

ಹಾರೂಗೇರಿ,02: ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಲಿಂ. ಯಲ್ಲಾಲಿಂಗ ಮಹಾರಜರ ಹಾಗೂ ಲಿಂ. ಸಿದ್ಧರಾಮ ಶಿವಯೋಗಿಗಳನ್ನು ಮರೆ ಮಾಚುವ ಅಥವಾ ಅವರಿಗಿಂತಲೂ ಅಧಿಕವಾಗಿ ನಡೆದುಕೊಳ್ಳುತಿದ್ದೇವೆ ಎಂದು ಕೆಲವರು ಹೇಳುತಿದ್ದಾರೆ ಇದು ಅಂತವರ ಅಂಧಕಾರದ ದೃಷ್ಠಿ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ ಮುರುಘರಾಜೇಂದ್ರ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಟ್ಟಣದ ಲಿಂ. ಯಲ್ಲಾಲಿಂಗ ಮಹಾರಾಜರ 33ನೇ ವರ್ಷದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು. ಮುಗಳಖೋಡ ಮಠದ ಗುರು ಪರಂಪರೆಯು ವಿಶಿಷ್ಠವಾದದ್ದು ಅದನ್ನು ಅರಿಯದೆ ಮಾತನಾಡುವುದು ಸರಿಯಲ್ಲ. ಶ್ರೀಮಠಕ್ಕೆ ಬರುವ ಜನ ಕಡೆಮೆಯಾಗಿದೆ ಎನ್ನುವುದು ಕೆಲವರ ಅಭಿಪ್ರಾಯ. 

    ಜನ ಕಡಿಮೆಯಾದರೂ ಕೂಡ ಭಕ್ತರ ಸಂಖ್ಯೆ ಎಂದಿಗೂ ಕಡಿಮೆ ಆಗಿಲ್ಲ ಆಗಿಯೂ ಇಲ್ಲ. ಇದು ತಪಸ್ಸಿನ ಭೂಮಿ ಇಲ್ಲಿ ಬಂದು ತಪಸ್ಸು ಮಾಡಿದರೆ ಜೀವನದ ಸಾರ್ಥಕತೆ ನಿಮ್ಮದಾಗುತ್ತದೆ. ತಪಾಸಣೆ ಮಾಡಲು ಬಂದರೆ ಅದು ಅಂತವರ ದೌಬರ್ಾಗ್ಯ ಎಂದರು. 

ಬಸವಕಲ್ಯಾಣ ಶಾಸಕ ಹಾಗೂ ಕನರ್ಾಟಕ ಅರಣ್ಯ ನಿಗಮದ ಅಧ್ಯಕ್ಷ ಬಿ. ನಾರಾಯಣರಾವ್ ಮಾತನಾಡಿ ಇವತ್ತು ನಾನು ಶಾಸಕನಾಗಿ ನಿಗಮದ ಅಧ್ಯಕ್ಷನಾಗಿದ್ದೇನೆ ಅಂದರೆ ಅದಕ್ಕೆ ಕಾರಣ ಸಿದ್ಧರಾಮ ಶಿವಯೋಗಿಳು ನನ್ನ ಮೇಲೆ ತೋರಿದ ಕರುಣೆ ಆಶೀವರ್ಾದದ ಪ್ರತಿಫಲ, ಎಲ್ಲಾ ಮಠಗಳ ಒಂದಲ್ಲಾ ಒಂದು ಚೌಕಟ್ಟಿನಲ್ಲಿ ಇದ್ದರೆ ಮುಗಳಖೋಡ ಶ್ರೀಮಠ ಸರ್ವರಿಗೂ ಸಮ ಬಾಳು ಎನ್ನುವ ಉನ್ನತ ಭಾವನೆಯನ್ನು ಹೊಂದಿದೆ ಎಂದು ಭಾವಪರವಶರಾಗಿ ಹೇಳಿದರು. ಎಂದರು. ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿ  ಈ ಸಂದರ್ಭದಲ್ಲಿ ಮುಗಳಖೋಡ ಕ್ಷತ್ರಕ್ಕೆ ತನ್ನದೇ ಆದ ವಿಶಿಷ್ಠ ಮೌಲ್ಯಗಳನ್ನು ಹೊಂದಿದೆ ಎಂದರು. ಶ್ರೀಗಳಿಗೆ ಬಂಗಾರದ ಕಿರೀಟ ಧಾರಣೆ ಹಾಗೂ ಸಿಂಹಾಸನಾರೂಢ ಕಾರ್ಯಕ್ರಮಗಳು ನೆರವೇರಿದವು. ಬೆಳಗಾವಿಯ ಸಂಜಯ ಬಿರಡಿ ಹಾಗೂ ಕುಟುಂಬ ವರ್ಗದವರಿಂದ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಹಾಗೂ ಬಾಗಲಕೋಟೆ ಭಕ್ತರಿಂದ ಬಂಗಾರದ ಉಂಗುರ ಮತ್ತು ಮುಂಬೈಯ ಭಕ್ತರಿಂದ 2 ಲಕ್ಷ ರೂಗಳ ನಗದು ಕಾಣಿಕೆ ಸಮರ್ಪಣೆಯಾದವು. ಎಲ್ಲ ಗಣ್ಯಮಾನ್ಯರನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು. 

ರನ್ನ ಬೆಳಗಲಿಯ ಸಿದ್ಧರಾಮ ಸ್ವಾಮೀಜಿಯವರಿಗೆ ಶ್ರೀಮಠದಿಂದ ಪ್ರಭುದ್ಧ ಪ್ರವಚನ ಸಿದ್ಧ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

    ಸಿದ್ಧಶ್ರೀ ಸೇವಾ ಸಮೀತಿ ಹಾಗೂ ಡಿವೈನ್ ಚಾಟರ್ೆಬಲ್ ಟ್ರಸ್ಟ್ವತಿಯಿಂದ 10 ಸಾವಿರ ಸದಸ್ಯರ ಸದಸ್ಯತ್ವದ ಪ್ರವೇಶ ಪತ್ರಗಳನ್ನು ಶ್ರೀಗಳು ಬಿಡುಗಡೆ ಮಾಡಿದರು. ಸುನೀಲ ಕಬ್ಬೂರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಅಪ್ಪಾಜೀ ಸಂಗೀತ ಕಲಾ ಬಳಹದವರಿಂದ ಭಕ್ತಿಯ ಸಂಗೀತ ಕಾರ್ಯಕ್ರಮ ಪ್ರಸ್ತುತವಾದವು. ಈ ಸಂದರ್ಭದಲ್ಲಿ ಶ್ರೀಮಠದ ಸಕಲ ಸದ್ಭಕ್ತರು ಹಾರಿದ್ದರು.