ಲೋಕದರ್ಶನ ವರದಿ
ಬೆಳಗಾವಿ 11: ಮಕ್ಕಳ ಪ್ರಕಾಶಮಾನ ಭವಿಷ್ಯಕ್ಕಾಗಿ ಯಾವುದೇ ಹೊಂದಾಣಿಕೆಗಳನ್ನು ಮಾಡಬೇಡಿ ಮಕ್ಕಳಿಗಾಗಿ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಒದಗಿಸುವುದು ಪ್ರತಿ ಪೋಷಕರು ಕರ್ತವ್ಯವೂ ಆಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಲ್ ಪ್ರಕಾಶ್ ಮಿಠಾರೆ ತಿಳಿಸಿದರು.
ದೀಪ ಪ್ರಜ್ವಲನೆ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಶ್ರೀನಿಕ ಉಮಚಗಿಯ ನೃತ್ಯ ಹಾಗೂ ದೇವಿಕಾ ಪದ್ಮನ್ ಅವರವರ ಸ್ವಾಗತ ಭಾಷಣದ ಬಳಿಕ ಅತಿಥಿಗಳಿಂದ ಶಾಲಾ ಮಕ್ಕಳು ಮತ್ತು ಅವರ ಪೋಷಕರಿಗೆ ಅಗತ್ಯವಾದ ಎರಡು ಮಾತುಗಳು ತಿಳಿಸಲಾಯಿತು. ಆನಂದ ಚೌಗುಲೆ ರವರಿಂದ ಪರದೆಯ ಮೇಲೆ ವಾಷರ್ಿಕ ಸಮಾವೇಶವನ್ನು ಪ್ರದಶರ್ಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಂದ ಪ್ರದಶರ್ಿಸಲಾಯಿತು ವಾಷರ್ಿಕ ಆಟದಲ್ಲಿ ಮತ್ತು ವಿವಿಧ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿಸ್ತರಿಸಲಾಯಿತು. ಪ್ರಾಂಶುಪಾಲರಾದ ಸ್ನೇಹಲ್ ಶ್ರೀಹರ್ಷ ಮಕ್ಕಳ ಕುರಿತು ತಮ್ಮ ಪೋಷಕರೊಡನೆ ಕೂಡಿ ಪ್ರತಿಕ್ರಿಯೆ ಗಳಿಸಿದರು. 3 ವಿಜೇತರಾದ ಶಾಲಾ ಮಕ್ಕಳ ತಾಯಂದಿರಿಗೆ ಬೆಳ್ಳಿ ಪದಕ ನೀಡಲಾಯಿತು. ಎಲ್ಲಾ ನರ್ಸರಿ ಮಕ್ಕಳಿಗೆ ಪದವೀಧರರ ಸಮಾರಂಭ ಮಾಡಲಾಯಿತು. ಅರ್ಣವ್ ನಾಯಕ್ ಕೃತಜ್ಞತೆ ತಿಳಿಸಿದರು. ಎಲ್ಲಾ ಪೋಷಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಿಕೆ ಶಿವಣಗಿ ಶಾಲೆಯ ಪ್ರಾಂಶುಪಾಲರಾದ ಮೀನಾಕ್ಷಿ ವಾರ್ಡರ್ ಹಾಗೂ ಅತಿಥಿಗಳಾಗಿ ಸಮಾಜಸೇವಕರಾದ ಮೋಹಮ್ಮದ್ ರಸೂಲ್ ಪೀರಜಾದೆ ರವರು, ಅಧ್ಯಕ್ಷ ವಿಜಯ್ ಬೊಂಗಾಳೆರವರು ಹಾಜರಿದ್ದರು.