ನಂದನ ಮಕ್ಕಳ ಧಾಮದಲ್ಲಿ ದೀಪಾವಳಿ ಕಾರ್ಯಕ್ರಮ

ಲೋಕದರ್ಶ ವರದಿ

ಬೆಳಗಾವಿ, 11: ಸಮಾಜದ ಕಟ್ಟಳೆಗಳಿಂದ ನೊಂದಿರುವ ಮತ್ತು ಸಾಮಾಜಿಕ, ಆಥರ್ಿಕ ಹಾಗೂ ಶೈಕ್ಷಣಿಕವಾಗಿ ದುರ್ಬಲರಾಗಿರುವ ಮಕ್ಕಳ ಮುಖಗಳಲ್ಲಿ ಸಂತಸ ಮೂಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವದೆ ನಿಜವಾದ ಜನ ಸೇವೆ ಎಂದು ಹಿರಿಯ ನ್ಯಾಯವಾದಿ ಬಸವರಾಜ ರೊಟ್ಟಿ ಹೇಳಿದ್ದಾರೆ.

ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ ದಂಪತಿಗಳು ನಗರದ ನಂದನ ಮಕ್ಕಳ ಧಾಮದಲ್ಲಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರು ಬಸವ ಮಾರ್ಗದಲ್ಲಿ ನಡೆದು ಮೇಲು ಕೀಳು ರಹಿತ ಸಮಾನತೆಯ ಸಮಾಜ ನಿಮರ್ಿಸುವ ಮೂಲಕ ಸರ್ವರಿಗೂ ಗೌರವಯುತ ಬದಕು ಕಲ್ಪಿಸಬೇಕಾಗಿದೆ ಎಂದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಮಾತನಾಡಿ, ಬಸವ ಪರಿಣಿತ ದಾಸೋಹ ಮನೋಭಾವದ ಸಮಾಜ ನಮ್ಮ ಮುಂದೆ ಇರುವವರೆಗೆ ಯಾರು ಅನಾಥರಲ್ಲ. ಶೋಷಿತ ಸಮಾಜದ ಮಕ್ಕಳು ಅನಾಥರಲ್ಲ. ಅನಾಥ ಎಂಬ ಶಬ್ದ ಕೊನೆಗಾಣಬೇಕು. ಇಂತಹ ಮಕ್ಕಳನ್ನು ಬಸವ ಸುತರೆಂದು ಕರೆಯಬೇಕು. ಬಸವ ಸುತರು ಯಾವ ಕ್ಷಣದಲ್ಲೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ ಎಚ್.ಪಿ.ಹಂಚಿನಮನಿ ಅವರು ಮಾತನಾಡಿ, ನಂದನ ವನವು ನಿಜಕ್ಕೂ ನಂದನ ವನವಾಗಿದೆ. ಇಲ್ಲಿ ಬಗೆ ಬಗೆಯ ಹೂವುಗಳು ಅರಳಿವೆ ಎಂದರು. 

ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ ಹಾಗೂ ಅವರ ಧರ್ಮಪತ್ನಿ ಹಾಗೂ ಗ್ರಾಹಕರ ವೇದಿಕೆಯ ಸದಸ್ಯೆ ಸುನಿತಾ ಬಾಗೇವಾಡಿ ಅವರುಗಳು ಅಲ್ಲಿಯ ಮಕ್ಕಳಿಗೆ ಆರತಿ ಬೆಳಗಿದರು. ಉಪಹಾರ, ಸಿಹಿ ತಿಂಡಿ ಮತ್ತು ಪಟಾಕಿಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿದರು.

ಮಕ್ಕಳ ಧಾಮದ ಅಧೀಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ಎಂ.ಟಿ.ಪಾಟೀಲ ಹಾಗೂ ಇತರ ಅನೇಕರು ಭಾಗವಹಿಸಿದ್ದರು.