ಕೊಪ್ಪಳ 02: ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಹಮ್ಮಿಕೊಳ್ಳಲಾದ "ಸ್ವಚ್ಛಾಗ್ರಹಿಗಳ ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ (ಟಿಓಟಿ) ಕಾಯರ್ಾಗಾರವು ಯಶಸ್ವಿಯಾಗಿ ಜರುಗಿತು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ, ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿದರ್ೆಸೆ ಮುಕ್ತ ಎಂದು ಈಗಾಗಲೇ ಸಕರ್ಾರದಿಂದ ಘೋಷಣೆ ಮಾಡಿದ್ದು, ಸ್ವಚ್ಛಾಗ್ರಹಿಗಳಿಗೆ ಓಡಿಎಫ್ ಸುಸ್ಥಿರತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿಮರ್ಾಣ ಮಾಡಿಕೊಂಡ ಫಲಾನುಭವಿಗಳಿಗೆ ಬಳಕೆ ಮಾಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ಸ್ವಚ್ಛಾಗ್ರಹಿಗಳಿಗೆ ಒಂದು ದಿನದ ಸ್ವಚ್ಛಾಗ್ರಹಿಗಳ ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ (ಟಿಓಟಿ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ರಾಜ ಅವರು ಸಸಿ ನೆಡಿಸಿ ಮರ ಬೆಳೆಸಿ ಎಂಬ ಸಂದೇಶ ಸಾರುವ ಮೂಲಕ ಕಾಯರ್ಾಗಾರವನ್ನು ಉಧ್ಘಾಟಿಸಿ, ಮಾತನಾಡಿ, ಈ ತರಬೇತಿಯ ಪ್ರಯೋಜನ ಪಡೆದುಕೊಂಡು ಗ್ರಾಮೀಣ ಪ್ರದೇಶಗಳ ಸ್ವಚ್ಛಾಗ್ರಹಿಗಳಿಗೆ ಸುಸ್ಥಿರತೆ ಮತ್ತು ಶೌಚಾಲಯಗಳ ಬಳಕೆ ಕುರಿತು ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.
ಉಪಕಾರ್ಯದಶರ್ಿ ನರೆಂದ್ರನಾಥ ತೊರವಿ, ಯೋಜನಾ ನಿದರ್ೆಶಕ ರವಿ ಬಸರಿಹಳ್ಳಿ ಕಾಯರ್ಾಗಾರದಲ್ಲಿ ಉಪಸ್ಥಿತರಿದ್ದು, ಪ್ರಾಸ್ತಾವಿಕವಾಗಿ ತರಬೇತಿದಾರರನ್ನು ಕುರಿತು ಮಾತನಾಡಿದರು. ಈ ತರಬೇತಿದಾರರ ತರಬೇತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಆಯ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿ ಒಟ್ಟು ಜಿಲ್ಲೆಯ 40 ಸಿಬ್ಬಂದಿಗಳು ತರಬೇತಿಯನ್ನು ಪಡೆದುಕೊಂಡರು. ತರಬೇತಿಯ ಕಾಯರ್ಾಗಾರವನ್ನು ರಾಜ್ಯ ಕಛೇರಿಯಿಂದ ತರಬೇತಿಯನ್ನು ಪಡೆದು ಬಂದ ಜಿಲ್ಲಾ ಸಮಾಲೋಚಕ ರಾಮಣ್ಣ ಬಂಡಿಹಾಳ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಇವರು ತರಬೇತಿಯನ್ನು ನೀಡಿದರು. ಋತು ಚಕ್ರ ನಿರ್ವಹಣೆ ಕುರಿತು ಗಂಗಾವತಿ ತಾಲೂಕಿನ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಅವರು ಮಾಹಿತಿಯನ್ನು ನೀಡಿದರು. ಕಾಯರ್ಾಗಾರವು ಯಶಸ್ವಿಯಾಗಿ ಜರುಗಿತು.