ಜಿಲ್ಲಾ ತಪಾಸಣಾ ಮೇಲ್ವಿಚಾರಣಾ ಸಮಿತಿ ಸಭೆ

ಗದಗ 25:     ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ  ಅಧ್ಯಕ್ಷತೆಯಲ್ಲಿ   ಜಿಲ್ಲಾಧಿಕಾರಿಗಳ  ಕಚೇರಿ ಸಭಾಂಗಣದಲ್ಲಿ ಇಂದು   ಜಿಲ್ಲಾ ಸಲಹಾ ಸಮಿತಿ (ಆಣಡಿಛಿಣ ಂಜತಠಡಿಥಿ ಅಠಟಟಣಣಜಜ) ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ (ಆಣಡಿಛಿಣ ಟಿಠಿಜಛಿಣಠಟಿ ಚಿಟಿಜ ಒಠಟಿಣಠಡಿಟಿರ ಅಠಟಟಣಣಜಜ) ಸಮಿತಿ ಸಭೆಯ  ಜರುಗಿತು.  

  ಜಿಲ್ಲಾಧಿಕಾರಿಗಳು ಮಾತನಾಡಿ ಕಾಯ್ದೆಯಡಿಯಲ್ಲಿ ನೋಂದಾಯಿತವಲ್ಲದ ಮತ್ತು ನೋಂದಯಿಸಲಾಗಿರುವ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಪೂರ್ವಭಾವಿ ಮಾಹಿತಿ ನೀಡದೇ ಪರಿಶೀಲನೆ ಮಾಡಿ ಎಲ್ಲ ಸ್ಕ್ಯಾನಿಂಗ್ ಸೆಂಟರ್ಗಳು ಕಾಯ್ದೆ ಕಾನೂನು ಹಾಗೂ ನಿಯಮಗಳನ್ನು ಪಾಲಿಸುತ್ತಾ ಇರುವದನ್ನು ಪರಿಶೀಲನೆ ಮಾಡುವದು ಗದಗ ನಗರದಲ್ಲಿ ಹೆಚ್ಚಿಗೆ ಸ್ಕ್ಯಾನಿಂಗ್ ಸೆಂಟರಗಳು ಇದ್ದ ಕಾರಣ ತಂಡಗಳ ರಚನೆ ಮಾಡಿ ಅವರ ಸೂಕ್ತ ದಾಖಲಾತಿ ಮತ್ತು ರಜಿಸ್ಟರ್ಗಳನ್ನು ನಿರ್ವಹಣೆ ಮಾಡುತ್ತಾ ಇರುವದನ್ನು ಪರಿಶೀಲಿಸಿ ನ್ಯೂನತೆಗಳು ಕಂಡು ಬಂದಲ್ಲಿ ನಿದರ್ಾಕ್ಷಿಣ್ಯವಾಗಿ ಕ್ರಮಕೊಳ್ಳಲು ಜಿಲ್ಲಾಧಿಕಾರಿಗಳು  ಸೂಚಿಸಿದರು. ಹೊಸದಾಗಿ ನೋಂದಾಯಿಸಲು ಬಂದಂತಹ ಸಂದರ್ಭಗಳಲ್ಲಿ ದಾಖಲಾತಿಗಳು ಅಪೂರ್ಣ ಅಥವಾ ನಕಲಿ ಅಂತ ಕಂಡುಬಂದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮಕೈಗೊಂಡು ಎಫ್ಐಆರ್ ಮಾಡಲು ಸೂಚಿಸಿದರು.    ತಾಲೂಕ ಆರೋಗ್ಯಾಧಿಕಾರಿಗಳು ಸ್ಕ್ಯಾನಿಂಗ ಸೆಂಟರಗಳಿಗೆ ಬೇಟಿ ನೀಡಿ ಪ್ರತಿ ಮಾಹೆ ವರದಿ ಸಲ್ಲಿಸಲು ಸೂಚಿಸಿದರು

ಡಾ. ವೈ.ಕೆ ಭಜಂತ್ರಿ  ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗರವರು ಕಅ & ಕಓಆಖಿ ಕಾಯ್ದೆ ಕುರಿತು ಜಿಲ್ಲಾ ಸಲಹಾ ಸಮಿತಿಯ ಎಲ್ಲ ಸದಸ್ಯರನ್ನು ಉದ್ದೇಶಿಸಿ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡುತ್ತ 2018-19ನೇ ಸಾಲಿನ ಸದರ ಕಾರ್ಯಕ್ರಮದ ಪ್ರಗತಿಯ ವರದಿ ಹಾಗೂ ಪಿ.ಸಿ&ಪಿ.ಎನ್.ಡಿ.ಟಿ ಗದಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್ಗಳ ವಿವರವನ್ನು ಹೇಳಿದರು. ಗದಗ ಜಿಲ್ಲೆಯಲ್ಲಿ 71 ಸ್ಕ್ಯಾನಿಂಗ್ ಸೆಂಟರ್ಗಳಿಗೆ ನೋಂದಣಿ ಮಾಡಿ ಕೊಡಲಾಗಿದ್ದು ಅವುಗಳ ಪೈಕಿ 12 ಸ್ಕ್ಯಾನಿಂಗ್ ಸೆಂಟರ್ಗಳು ಬಂದಾಗಿದ್ದು, 59 ಸ್ಕ್ಯಾನಿಂಗ್ ಸೆಂಟರ್ರಗಳು ಕಾರ್ಯನಿರ್ವಹಿಸುತ್ತೀವೆ ಎಂದು ಸಭೆಗೆ ಮಾಹಿತಿ ನೀಡಿದರು.  ಹಾಗೂ ಪಿ.ಸಿ&ಪಿ.ಎನ್.ಡಿ.ಟಿ ಕಾಯ್ದೆ ಮಾಹಿತಿ ವಿವರಿಸಿದರು

ಸ್ಕ್ಯಾನಿಂಗ್ ಸೆಂಟರ್ಗಳ ತಪಾಸಣೆಗಾಗಿ ತಾಲೂಕ ಮಟ್ಟದಲ್ಲಿ ತಂಡಗಳ ರಚನೆ ಮಾಡುವುದು, ಹಾಗೂ ತಾಲೂಕ ಆರೋಗ್ಯಾಧಿಕಾರಿಗಳು ಸ್ಕ್ಯಾನಿಂಗ ಸೆಂಟರಗಳಿಗೆ ಬೇಟಿ ನೀಡಿ ಪ್ರತಿ ಮಾಹೆ ವರದಿ ಸಲ್ಲಿಸುವುದು. ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮಕೈಗೊಳ್ಳೂವ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು.    

ಡಾ. ವ್ಹಿ ಎಸ್ ಮಾದಿನೂರ ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗ ಇವರು ಸಭೆಯನ್ನು ಸ್ವಾಗತಿಸದರು.   ಸಭೆಯಲ್ಲಿ ಡಾ. ಎಸ್. ಎಂ. ಹೊನಕೇರಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು, ಸಮಿತಿ ಸದಸ್ಯರು ಹಾಗೂ,  ತಾಲೂಕಾ ಆರೊಗ್ಯಾಧಿಕಾರಿಗಳು,   ವೆಂಕಟೇಶ ಮಹಾಜನ ಆರೋಗ್ಯ ಮೇಲ್ವಿಚಾರಕರು ಆರೋಗ್ಯ ಇಲಾಖೆಯ  ವಿವಿಧ ಇಲಾಖೆಯ ಅಧಿಕಾರಿಗಳು,   ಉಪಸ್ಥಿತರಿದ್ದರು.