ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಲೋಕದರ್ಶನ ವರದಿ

ಕೊಪ್ಪಳ 01: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಹಿರಂಗವಾಗಿ ವಿಪರೀತ ಬಳಕೆ ಮಾಡಲಾಗುತ್ತಿದೆ. ಯಾರು ಹೇಳುವವರು ಕೇಳುವವರಿಲ್ಲದಂತಾಗಿದೆ. ಆಗೊಂದು ಈಗೊಂದು, ಅಲ್ಲೊಂದು ಇಲ್ಲೊಂದು, ದಂಡ ಹಾಕಿ ತಮ್ಮ ಕೆಲಸ ಮುಗಿತೆಂದು ಕಾಟಚಾರದ ಕರ್ತವ್ಯ ನಿರ್ವಹಿಸಲಾಗುತ್ತಿದೆ. ತಿಳಿದು ತಿಳಿಯದೇಯೋ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಬಳಕೆದಾರರು ತಮ್ಮ ಮತ್ತು ಇತರರ ಪೀಳಿಗೆಗೂ ಹಾನಿಕಾರಕ ರಾಸಾಯನಿಕಗಳಿಂದ ಕ್ಯಾನ್ಸರ್ ಮತ್ತು ಇನ್ನಿತರ ರೋಗಗಳು ಹರಡುತ್ತಿದ್ದಾರೆ. ತಕ್ಷಣ ತಾವು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಅವರವರ ವ್ಯಾಪ್ತಿಯ ನಿಷೇಧಿತ ಸಾರ್ವಜನಿಕ ಧೂಮಪಾನಿಗಳ ವಿರುದ್ಧ ನಿರಂತರ ಕಾಯರ್ಾಚರಣೆ ನಡೆಸುವಂತೆ ಸೂಚಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಲವು ಸಂಘಟನೆಗಳ ಮುಖಂಡರು ಮನವಿ ಅಪರ್ಿಸಿ ಒತ್ತಾಯಿಸಿದರು. 

ಒಂದು ಅಧ್ಯಯನ ಪ್ರಕಾರ, ದೇಶದಲ್ಲಿ ಸುಮಾರು 26 ಕೋಟಿ ಜನರು ಧೂಮಪಾನ ಮಾಡುತ್ತಿದ್ದಾರೆಂಬ ವರದಿ ಹೇಳಿದೆ. ಇದರ ಪ್ರಕಾರ ಒಬ್ಬ ವ್ಯಕ್ತಿ ತಾನು ಸೇದಿದ ಸಿಗರೇಟ್/ಬೀಡಿಯ ಹೊಗೆ ಸೇವಿಸಿ ಹೊರ ಬಿಟ್ಟಾಗ ಅಲ್ಲಿರುವ ಆರೋಗ್ಯವಂತ ಹತ್ತಾರು ಜನರು ಹಾನಿಕಾರಕ ರಾಸಾಯನಿಕ ವಾಯು ಸೇವಿಸಿ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಧೂಮಪಾನಿಗಳು ಬಿಟ್ಟ ಹೊಗೆಯು ಅಲ್ಲಿಯ ಟೇಬಲ್, ಕುಚರ್ಿ, ಗೋಡೆಗಳು, ಬಾಗಿಲುಗಳಿಗೆ ಹಾನಿಕಾರಕ ರಾಸಾಯನಿಕಗಳು ವರ್ಷಗಳವರೆಗೂ ಅಂಟಿಕೊಂಡಿರುತ್ತವೆ. ಆ ವಸ್ತುಗಳನ್ನು ಮುಟ್ಟುವ ಮಕ್ಕಳು, ಜನರಿಗೂ ಕ್ಯಾನ್ಸರ್ ಹಾಗೂ ಬೇರೆ ಬೇರೆ ರೋಗಗಳು ಉಲ್ಭಣಗೊಳ್ಳುತ್ತದೆ ಎಂದು ವರದಿ ನೀಡಿದೆ. ಹಾಗಾದರೆ ಇಡೀ ದೇಶದ ಸುಮಾರು ನೂರಾ ಮೂವತ್ತೂ ಕೋಟಿಗೂ ಹೆಚ್ಚಿನ ಜನರು ಅನಿವಾರ್ಯವಾಗಿ ವಿಷಕಾರಿ ವಾಯು ಸೇವಿಸುತ್ತಿದ್ದಾರೆ. 

ಸಾರ್ವಜನಿಕ ಸ್ಥಳಗಳು ಧೂಮಪಾನದಿಂದ ಸಂಪೂರ್ಣ ಕಲುಷಿತ ವಾಯು ಮಾಲಿನ್ಯದ ಜಿಲ್ಲೆಯಾಗಿ ರೂಪಗೊಂಡಿದೆ. ಈ ಕಳಂಕ ತೆಗೆದುಹಾಕಲು ಪ್ರಮುಖ ಅಧಿಕಾರಿಗಳಾದ ತಾವು ಜಿಲ್ಲೆಯ ಆಯಾ ತಾಲ್ಲೂಕುಗಳ ಸರ್ಕಾರಿ ಕಛೇರಿಗಳು, ಆಸ್ಪತ್ರೆಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ನ್ಯಾಯಾಲಯಗಳು, ಪೊಲೀಸ್ ಠಾಣೆಗಳು, ಸಾರ್ವಜನಿಕ ಶೌಚಾಲಯಗಳು, ಹೋಟೆಲ್ಗಳು, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಕಛೇರಿಗಳ ಒಳ ಹೊರ ಆವರಣಗಳಲ್ಲಿ, ಮುಂಭಾಗಗಳಲ್ಲಿ, ಕಟ್ಟೆಗಳಲ್ಲಿ, ರಸ್ತೆಗಳ ಎರಡೂ ಬದಿಗಳಲ್ಲಿ, ವಾಯು ವಿಹಾರಕ್ಕೆ ಹೋಗುವ ಸ್ಥಳಗಳಲ್ಲಿ, ಕಿರಿಯರಿಂದ ಮುದಿ ವಯಸ್ಸಿನವರು, ವಿದ್ಯಾವಂತರು ಅವಿದ್ಯಾವಂತರೂ ನಿರ್ಭಯವಾಗಿ ಸಿಗರೇಟ್, ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ವಿಪರೀತ ಸೇವಿಸುತ್ತಿದ್ದು, ಇಂತಹ ಸ್ಥಳಗಳನ್ನು ತೀವ್ರ ಗಮನಿಸಿ ತಕ್ಷಣದಿಂದ ನಿರಂತರ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚಿಸಿ, ಸಾರ್ವಜನಿಕ ಧೂಮಪಾನ ನಿಲ್ಲಿಸಿ ಆರೋಗ್ಯ ರಕ್ಷಿಸಿ ಎಂಬ ಆಂದೋಲನವೇ ಆರಂಭಿಸಿ ಆರೋಗ್ಯ ಸ್ನೇಹಿ, ಪರಿಸರ ಸ್ನೇಹಿ, ನಾಗರಿಕ ಸ್ನೇಹಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗುವಿರೆಂದು ನಿರೀಕ್ಷಿಸುತ್ತೇವೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಭ್ರಷ್ಠಾಚಾರ ಮುಕ್ತ ಕನರ್ಾಟಕದ ರಾಜ್ಯಾಧ್ಯಕ್ಷ ಪ.ಯ. ಗಣೇಶ, ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾದಿಕ ಅಲಿ ದಫೇದಾರ ಪೈಲ್ವಾನ್, ಉಪಾಧ್ಯಕ್ಷ ಬಸವರಾಜ ಗಾಳಿ ಪೈಲ್ವಾನ್, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ, ಮುಕ್ತಿ ಕನರ್ಾಟಕ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರ ನರೇಗಲ್ಲ ಇನ್ನೂ ಮುಂತಾದವರು ತಿಳಿಸಿದ್ದಾರೆ.