ಲೋಕದರ್ಶನ ವರದಿ
ಗದಗ 23: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆ ಹಾಗೂ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ಇದೇ ಜ. ದಿ. 26 ಹಾಗೂ 27 ರಂದು ಜಿಲ್ಲಾಮಟ್ಟದ ಮಹಿಳಾ ಸಮಾವೇಶವನ್ನು ನಗರದ ಹಾತಲಗೇರಿ ರಸ್ತೆಯಲ್ಲಿರುವ ಅಂಜುಮನ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹೈದರಾಬಾದ್-ಕನರ್ಾಟಕ ವಿಭಾಗದ ಪ್ರಾದೇಶಿಕ ನಿದರ್ೇಶಕ ಪಿ. ಗಂಗಾಧರ ರೈ ಅವರು ಹೇಳಿದರು.
ನಗರದ ಕೇಂದ್ರ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿಶೇಷ ಅವಕಾಶ ಮತ್ತು ಪ್ರೇರಣೆ ಕೊಡುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಸಮಾವೇಶದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಿವಲೀಲಾ ಅಕ್ಕಿ ಅವರು ಆಯ್ಕೆಗೊಂಡಿದ್ದಾರೆ ಎಂದು ಹೇಳಿದರು.
ಜ. 26 ರಂದು ಬೆಳಿಗ್ಗೆ 9.30 ಗಂಟೆಗೆ ವರ್ಣರಂಜಿತ ಮೆರವಣಿಗೆ ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಅವರು ಚಾಲನೆ ನೀಡುವರು. ಬೆಳಿಗ್ಗೆ 10.30 ಗಂಟೆಗೆ ಮಹಿಳಾ ಸಮಾವೇಶವನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರಿಯಾದ ಪದ್ಮಲತಾ ನಿರಂಜನ್ಕುಮಾರ ಅವರು ಚಾಲನೆ ನೀಡಲಿದ್ದಾರೆ. ಶಾಸಕ ಎಚ್.ಕೆ ಪಾಟೀಲ ಅವರು ಅಧ್ಯಕ್ಷತೆವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಅವರು ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡುವರು. ಮಾಜಿ ಶಾಸಕ ಡಿ. ಆರ್ ಪಾಟೀಲ ಅವರು ಸಾಧಕ ಮಹಿಳೆಯರಿಗೆ ಸನ್ಮಾನ ಮಾಡುವರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿವರ್ಾಹಕ ನಿದರ್ೇಶಕ ಡಾ. ಎಲ್.ಎಚ್ ಮಂಜುನಾಥ್ ಅವರು ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ಯೋಜನೆಯ ಅಧಿಕಾರಿ ವರ್ಗದವರು ಭಾಗವಹಿಸಲಿದ್ದಾರೆ. ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದು ಹೇಳಿದರು.
ಜ. 27 ರಂದು ಮಧ್ಯಾಹ್ನ 3.30 ಗಂಟೆಗೆ ಸಮಾರೋಪ ಸಮಾರಂಭ ಸಾನಿಧ್ಯವನ್ನು ಶಿರಹಟ್ಟಿಯ ಜ. ಫಕ್ಕೀರ ಸಿದ್ಧರಾಮ ಮಹಾಸ್ವಾಮಿಗಳವರು ವಹಿಸುವರು. ಮಹಿಳಾ ಸಮಾವೇಶದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಅವರು ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಉಪಸ್ಥಿತರಿರುವರು ಎಂದು ಪಿ. ಗಂಗಾದರ ರೈ ಅವರು ಹೇಳಿದರು.
ಮಹಿಳಾ ಸಾಧಕರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಆಟೋಟ ಸ್ವಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಮಂಗಳೂರಿನ ಅಶೋಕ ಪೊಳಲಿಯವರಿಂದ ಮುಖವಾಡ ನೃತ್ಯಗಳು ಹಾಗೂ ಝೀ ಟಿ.ವಿಕಲಾವಿದರಿಂದ ಸಂಗೀತ ಮತ್ತು ಕಾಮಿಡಿ ಕಿಲಾಡಿಗಳಿಂದ ವಿಶೇಷ ಮನೋರಂಜನೆ ಕಾರ್ಯಕ್ರಮವಿದೆ ಜರುಗಲಿದೆ.
ಈ ಮಹಿಳಾ ಸಮಾವೇಶದಲ್ಲಿ ಸುಮಾರು 20 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಮಹಿಳೆಯರ ಸಮಸ್ಯೆಗಳ ಕುರಿತು 4 ಮಹಿಳಾ ವಿಚಾರ ಗೋಷ್ಠಿಗಳು ಮತ್ತು ಸಂವಾದ,ಸಿರಿ ಧಾನ್ಯಗಳ ಶುಚಿ-ರುಚಿಯಾದ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ, ಮಹಿಳೆಯರ ಗೃಹೋಪಯೋಗಿ ವಸ್ತುಗಳು, ಕೃಷಿ ಯಾಂತ್ರಿಕರಣ, ಕರಕುಶಲಇತ್ಯಾದಿ 150 ವಸ್ತು ಪ್ರದರ್ಶನ ಮಳಿಗೆಗಳು.ವಿಶೇಷ ಆಕರ್ಷಣೆಯಾಗಿ ಶ್ವಾನ ಪ್ರದರ್ಶನ. ಉತ್ತಮ ತಳಿಗೆ ಬಹುಮಾನ ಜಾನಪದ ಮತ್ತು ಸಾಂಸ್ಕೃತಿಕ ಕಲಾ ವೈಭವಗಳ ಮನೋರಂಜನಾ ಕಾರ್ಯಕ್ರಮಗಳು. ಮಹಿಳೆಯರಿಗೆ ಕ್ರೀಡಾ ಸ್ಪಧರ್ೆಗಳು ಮತ್ತು ಆಕರ್ಷಕ ಬಹುಮಾನಗಳು. ಸ್ವಉದ್ಯೋಗ ಮಾಡುವ ಮಹಿಳೆಯರಿಗೆ ಸ್ಥಳದಲ್ಲಿಯೇ ಪ್ರಗತಿನಿಧಿ (ಸಾಲ) ವಿತರಣೆ ಮಾಡಲಾಗುವುದು ಎಂದು ಪಿ.ಗಂಗಾಧರ ರೈ ಅವರು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ಸಮಾವೇಶದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ, ಕ್ಷೇತ್ರ ಯೋಜನಾಧಿಕಾರಿ ಸುಕೇಶ ಎ. ಎಸ್,ಉಪಸ್ಥಿತರಿದ್ದರು.