ಲೋಕದರ್ಶನ ವರದಿ
ಗದಗ 27: ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಸಿದ್ದಗೊಳಿಸುತ್ತಿದೆ ಎಂದು ಶಾಸಕ ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಉದರ್ು ಸ್ಕೂಲ್ನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗದಗ ಜಿಲ್ಲೆ ಹಾಗೂ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ವ್ಯವಸ್ಥಾಪನಾ ಸಮಿತಿ ಸಂಯುಕ್ತಾಶ್ರಯದಲ್ಲಿ ಜರಗುತ್ತಿರುವ ಜಿಲ್ಲಾಮಟ್ಟದ ಮಹಿಳಾ ಸಮಾವೇಶದ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಸ್ಥೆಯು ಮಹಿಳೆಯರನ್ನು ಆಥರ್ಿಕವಾಗಿ ಸದೃಢರನ್ನಾಗಿ ಮಾಡಲು ಶ್ರಮಿಸುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೊಡುಗೆಯು ಅಪಾರವಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಸಾಮಥ್ರ್ಯವನ್ನು ಪ್ರದಶರ್ಿಸುತ್ತಿದ್ದಾರೆ. ಸ್ತ್ರೀಶಕ್ತಿ ಗುಂಪುಗಳು, ಸ್ವಸಹಾಯ ಗುಂಪುಗಳು ತಾವುಗಳು ತಯಾರಿಸಿದ ಉತ್ತರ ಕನರ್ಾಟಕ ಖಾದ್ಯ ಪದಾರ್ಥಗಳಿಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ, ಎಲ್ಲಿಯ ವರೆಗೆ ಗ್ರಾಮಾಭಿವೃದ್ಧಿ ಸಾಧ್ಯವಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರು ಹಮ್ಮಿಕೊಂಡಿರುವ ಯೋಜನೆಗಳು ಮೆಚ್ಚುವಂತಾಗಿವೆ. ಪ್ರಧಾನಿ ಮೋದಿ ಅವರು ಮಹಿಳೆಯರಿಗಾಗಿ ಉಜ್ವಲ ಯೋಜನೆ, ಭೇಟಿ ಪಡಾವೋ ಭೇಟಿ ಬಚಾವೋ ಯೋಜನೆಗಳು ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಅವುಗಳ ಸದುಪಯೋಗವಾಗಬೇಕು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿವರ್ಾಹಕ ನಿದರ್ೇಶಕ ಎಲ್.ಎಚ್.ಮಂಜುನಾಥ ಅವರು ಮಾತನಾಡಿ, ದೇಶದ ಸ್ವಾಂತ್ರದ ನಂತರ ಮಹಿಳೆಯರ ಸಮಾನತೆ ಪ್ರಮುಖ ಘಟ್ಟವಾಗಿದೆ. ಈಗಲೂ ಸಹ ಅಸಮಾನತೆ ದೂರಾದರೆ ದೇಶದ ಅಭಿವೃದ್ಧಿ ಕಾಣಬಹುದು. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಮಹಿಳೆಯರಿಗೆ ಯಾವುದೇ ಭದ್ರತೆ ತೆಗದುಕೊಳ್ಳದೆ ಸುಮಾರು 35 ಸಾವಿರ ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 500 ಕೋಟಿ ರೂಗಳ ವ್ಯವಹಾರ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಪಂ ಅಧ್ಯಕ್ಷ ಎಸ್.ಪಿ.ಬಳಿಗಾರ, ಸರಫರಾಜ ಅಹ್ಮದ ಉಮಚಗಿ, ಗಾಯಕಿ ಶೋಭಾ ಹುಯಿಲಗೋಳ, ಪ್ರಾದೇಶಿಕ ನಿದರ್ೇಶಕ ಪಿ.ಗಂಗಾಧರ ರೈ, ಶಿವಲೀಲಾ ಅಕ್ಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಗಮ್ಮ ಗಂಗನಕಟ್ಟೆ, ಮಂಜುಳಾ ಪಾಟೀಲ, ರೋಣದ ತುಳಸಮ್ಮ ಹೊಳೆಆಲೂರ, ಶಿರಹಟ್ಟಿಯ ಮಾಬುಬಿ ಕವಲೂ, ಪ್ರೇಮಾ ಕಡೆಮನಿ, ಸುಜಾತಾ ಲಕ್ಷ್ಮೇಶ್ವರ, ರೋಣದ ಪುಷ್ಪಾ ವಜ್ರಬಂಡಿ, ಹಾಗೂ ಶಿರಹಟ್ಟಿಯ ಸರ್ವಮಂಗಳ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನಗರದ ತೋಂಟದಾರ್ಯ ಮಠದ ಆವರಣದಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕುಭಮೇಳದೊಂದಿಗೆ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕುದುರೆಗಳ ಕುಣಿತ, ಸಮ್ಮೇಳ,ವಿವಿಧ ಕಲಾತಂಡಗಳು ಹಾಗೂ ದೊಡ್ಡಾಟ ಕಲಾವಿದರ ವೇಷಭೂಷಣ ಮೆರಗು ನೀಡಿದವು.