ಬೆಳಗಾವಿ : ಈಜು ಮತ್ತು ಜ್ಯುಡೋ ಮಕ್ಕಳಲ್ಲಿ ಮಾನಸಿಕ ಮತ್ತು ಧೈಹಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಎಲ್ಲ ವಿದ್ಯಾಥರ್ಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಅತಿಥಿಗಳಾಗಿ ಜಿಲ್ಲಾ ಧೈಹಿಕ ಕ್ರೀಡಾ ಸಂಯೋಜಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ ಇವರು ಎಮ್. ಸಿ. ಧನವಂತ ತಿಳಿಸಿದರು.
ಗುರುವಾರ ರೋಟರಿ ಕ್ಲಬ್ ಗೋವಾವೇಸ್ ಈಜು ಕೊಳದಲ್ಲಿ ನಡೆದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಈಜು ಮತ್ತು ಜ್ಯುಡೋ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಜಿಲ್ಲಾ ನಿದರ್ೇಶಕರ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜು ಕಾಕತಿ ಇವರ ಸಂಯಕ್ತ ಆಶ್ರಯದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಸ್ಎ ಸಂಸ್ಥೆಯ ಸದಸ್ಯ ಹಾಗೂ ಉಪನ್ಯಾಸಕ ಎನ್ಎ ಜಾಧವ ವಹಿಸಿ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡೆಯಿಂದ ಸದೃಡ ಯುವಕರನ್ನು ನಿಮರ್ಾಣ ಮಾಡಿದರೆ ಉತ್ತಮ ದೇಶ ಕಟ್ಟಲು ಸಹಾಯಕರಾಗುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್ ಎಸ್ ಮೂಕನವರ ಹೂಗುಚ್ಚ ನೀಡಿ ಸ್ವಾಗತಿಸಿದರು, ಉಪನ್ಯಾಸಕಿ ಭಾರತಿ ಕುಲಗೋಡ ವಂದಿಸಿದರು, ಉಪನ್ಯಾಸಕ ಎಸ್ ಪಿ ನಂದನವಾಡ ನಿರೂಪಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕವೃಂದ, ವಿದ್ಯಾಥರ್ಿಗಳು, ಕಾಲೇಜಿನ ಕ್ರೀಡಾಪಟುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಬಾಗಿಯಾಗಿದ್ದರು.