ಲೀಡಬ್ಯಾಂಕ್ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಗದಗ 02: ಬ್ಯಾಂಕ್ನವರು ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಒದಗಿಸಿ ಸಕರ್ಾರದ ಯೋಜನೆಗಳ ಸೌಲಭ್ಯಗಳು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ನುಡಿದರು.  

ಗದಗ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ    ಲೀಡ ಬ್ಯಾಂಕ್ ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.    ಜಿಲ್ಲೆಯಲ್ಲಿ 5000 ವರೆಗೆ ಜನಸಂಖ್ಯೆ ಇರುವ ಗ್ರಾಮಗಳ ಪಟ್ಟಿಯನ್ನು  ಮಾಡಿ   ಅಂತಹ ಗ್ರಾಮಗಳಲ್ಲಿ ಹೊಸ ಬ್ಯಾಂಕ್  ಶಾಖೆ ಪ್ರಾರಂಭಿಸಲು ಸಂಸದ ಶಿವಕುಮಾರ ಉದಾಸಿ ಸಂಸದ   ಶಿವಕುಮಾರ ಉದಾಸಿ ತಿಳಿಸಿದರು. 

         ಜಿಲ್ಲೆಯಲ್ಲಿ  ಲೀಡ್ ಬ್ಯಾಂಕ್ನ 173  ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.    ಜಿಲ್ಲೆಯ ಸಾಲ ಠೇವಣಿ ಅನುಪಾತ   ಜೂನ್ 2018ರ ವರೆಗೆ ಶೇಕಡ  91.63  ಆಗಿದೆ.   ಜೂನ್ 2018     ಅಂತ್ಯದವರೆಗೆ   ಆದ್ಯತಾ  ವಲಯಕ್ಕೆ 222.11 ಕೋಟಿ ರೂ      ಹಾಗೂ ಕೃಷಿ ವಲಯಕ್ಕೆ 120.45 ಕೋಟಿ ರೂ. ಸಾಲ  ನೀಡಿಕೆಯಾಗಿದೆ.   ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ   ಸರಕಾರದ ಯೋಜನೆಗಳ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ  ಕೈಗೊಳ್ಳಲಾಗಿದೆ.       ಎಸ್.ಬಿ.ಐ ಟ್ರೇನಿಂಗ್ ಸೆಂಟರ್ ಹುಲಕೋಟಿಯಲ್ಲಿ  ಸಕರ್ಾರದ ಯೋಜನೆಗಳ  ಕುರಿತು    ತರಬೇತಿ   ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ  ಎಂದು ಲೀಡ್  ಬ್ಯಾಂಕ್ದ ಮ್ಯಾನೇಜರ್  ಬಿ.ವೈ ಕಾಂಬ್ಳೆ ಸಭೆಗೆ ತಿಳಿಸಿದರು.     

       ಜಿಲ್ಲೆಯಲ್ಲಿ  ಮುದ್ರಾ ಸಾಲ ಯೋಜನೆಯಡಿ   ಶಿಶು ಯೋಜನೆಯಲ್ಲಿ 12168  ಅಜರ್ಿಗಳು ಸ್ವೀಕರಿಸಿ 5175  ಲಕ್ಷ,   ಕಿಶೋರ ಯೋಜನೆಯಡಿ 11652 ಅಜರ್ಿಗಳು ಸ್ವೀಕರಿಸಿ   26943  ಲಕ್ಷ  ರೂ. ಹಾಗೂ ತರುಣ ಯೋಜನೆಯಡಿ 823   ಅಜರ್ಿಗಳನ್ನು  ಸ್ವೀಕರಿಸಿ  8041   ಲಕ್ಷ   ರೂ  ವಿತರಣೆಯಾಗಿದೆ  ಎಂದು  ಲೀಡ ಬ್ಯಾಂಕ್ ದ ಮ್ಯಾನೇಜ್ ಬಿ.ವೈ. ಕಾಂಬ್ಳೆ ಸಭೆಗೆ ತಿಳಿಸಿದರು.                    

      ಸಭೆಯಲ್ಲಿ     ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ,   ಪ್ರದಾನ ಮಂತ್ರಿ ಉದ್ಯೋಗ   ಖಾತ್ರಿ ಯೋಜನೆ,   ಪ್ರದಾನ ಮಂತ್ರಿ ಮುದ್ರಾ ಯೋಜನೆ,  ಪ್ರಧಾನ ಮಂತ್ರಿ ಆವಾಸ್ ಯೋಜನೆ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಚಚರ್ಿಸಲಾಯಿತು.    

     ಸಭೆಯಲ್ಲಿ ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ,     ಆರ್.ಬಿ.ಐ  ಅಸಿಸ್ಟಂಟ್ ಜನರಲ್ ಮ್ಯಾನೇಜರ್ ನಾಗರಾಜ,  ನಬಾರ್ಡದ ಎಜಿಎಂ ರಾಮನ್ ಜಗದೀಶನ್,  ಚೀಫ್ ಮ್ಯಾನೇಜರ್, ಆರ್.ಬಿ.ಓ,  ವಿ.ವಿ. ಕುಲಕಣರ್ಿ, ಜಿಲ್ಲಾ ಪಂಚಾಯತ್ ಯೋಜನಾ ನಿದರ್ೇಶಕ   ಟಿ. ದಿನೇಶ,  ಸೇರಿದಂತೆ ವಿವಿಧ ಬ್ಯಾಂಕ್  ನಿಯಂತ್ರಣಾಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.