ಧಾರವಾಡ 02; ದಿ ಧಾರವಾಡ ಡಿಸ್ಟ್ರಿಕ್ಟ್ ಲೀಗಲ್ ಪ್ರ್ಯಾಕ್ಟಿಷನಸರ್್ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜ.1ರಂದು ಚುನಾವಣೆ ಜರುಗಿತು. ಅಧ್ಯಕ್ಷ ಹುದ್ದೆಗೆ ಆಡಳಿತ ಮಂಡಳಿಯ ನಿದರ್ೇಶಕ ವ್ಹಿ.ಡಿ.ಕಾಮರಡ್ಡಿಯವರು ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ರಿಟನರ್ಿಂಗ್ ಅಧಿಕಾರಿಯವರು ಘೋಷಣೆ ಮಾಡಿದರು.
ಸಹಕಾರಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಒಂದು ಉಪಾಧ್ಯಕ್ಷ ಸ್ಥಾನಕ್ಕೆ ನಿದರ್ೇಶಕ ಅನೂಪ.ಜಿ.ದೇಶಪಾಂಡೆ ಮತ್ತು ಸಿ.ಕೆ.ನರೇಂದ್ರ ಇಬ್ಬರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರು. ಎಲ್ಲ 17 ಜನ ನಿದರ್ೇಶಕರು ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ನಂತರ ನಡೆದ ಮತ ಎಣಿಕೆಯಲ್ಲಿ ಸಿ.ಕೆ.ನರೇಂದ್ರ ಇವರು 7 ಮತಗಳನ್ನು, ಅನೂಪ.ಜಿ.ದೇಶಪಾಂಡೆ 10 ಮತಗಳನ್ನು ಪಡೆದರು. ಅವರನ್ನು ಸಹಕಾರಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರನ್ನಾಗಿ ರಿಟನರ್ಿಂಗ್ ಅಧಿಕಾರಿಯವರು ಘೋಷಣೆ ಮಾಡಿದರು.
ಧಾರವಾಡ ಸಹಕಾರಿಯ 2019 ರಿಂದ ಮುಂದಿನ 5 ವರ್ಷದ ಅವಧಿಗೆ ಚುನಾವಣೆ ನಡೆಸಲು ಡಿ. 23ರಂದು ಆಡಳಿತ ಮಂಡಳಿಯ 17 ನಿದರ್ೇಶಕರ ಸ್ಥಾನಗಳಿಗೆ ನಡೆಸಲು ತೀಮರ್ಾನಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆಡಳಿತ ಮಂಡಳಿಯ 17 ನಿದರ್ೇಶಕರ ಸ್ಥಾನಗಳಲ್ಲಿ 2 ಸ್ಥಾನಗಳು ಮಹಿಳೆಯರಿಗಾಗಿ, 2 ಸ್ಥಾನಗಳನ್ನು ಹಿಂದುಳಿದ ವರ್ಗದ 2ಅ ವರ್ಗದ ಅಭ್ಯಥರ್ಿಗಳಿಗೆ, ಒಂದು ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅಭ್ಯಥರ್ಿಗೆ, ಒಂದು ಸ್ಥಾನ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಅಭ್ಯಥರ್ಿಗೆ ಮೀಸಲಿರಿಸಲಾಗಿತ್ತು, ಸಾಮಾನ್ಯ ವರ್ಗದ ಅಭ್ಯಥರ್ಿಗಳಿಗೆ 11 ಸ್ಥಾನಗಳನ್ನು ನಿಗದಿಪಡಿಸಲಾಗಿತ್ತು.
ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿದ್ದು ಅವುಗಳಲ್ಲಿ 3 ಜನ ಅಭ್ಯಥರ್ಿಗಳು ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕದೊಳಗೆ ತಮ್ಮ ನಾಮಪತ್ರದಿಂದ ಹಿಂಪಡೆದಿದ್ದರಿಂದ 17 ಜನ ನಿದರ್ೇಶಕರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಎಂದು ದಿ. 17ರಂದು ರಿಟನರ್ಿಂಗ್ ಅಧಿಕಾರಿಯವರು ಘೋಷಣೆ ಮಾಡಿ ಆದೇಶವನ್ನು ಹೊರಡಿಸಿದರು.
ದಿ ಧಾರವಾಡ ಡಿಸ್ಟ್ರಿಕ್ಟ್ ಲೀಗಲ್ ಪ್ರ್ಯಾಕ್ಟಿಷನಸರ್್ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ಧಾರವಾಡ ಸಹಕಾರಿಯ 2019 ರಿಂದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಗೆ ನಿದರ್ೆಶಕರಾಗಿ ಸತೀಶ ಶೇಷಗಿರಿ ರಾಯಚೂರ, ಪ್ರಕಾಶ ಉಡಿಕೇರಿ, ಚಂದ್ರಗೌಡ ಕೆ ನರೇಂದ್ರ ಬಸಪ್ಪ ಪಿ ಧನಶೆಟ್ಟಿ, ರಾಜಶೇಖರ ಎಚ್ಅಂಗಡಿ, ಕೆ ಎಚ್ ಪಾಟೀಲ, ರೂಪಾ ವ್ಹಿ. ಕೆಂಗಾನೂರ, ಆರತಿ ಮುತಾಲಿಕ ದೇಸಾಯಿ, ಪ್ರಶಾಂತ ಡಿ ಕುಲಕಣರ್ಿ, ಶಾಂತಪ್ಪ ಬಿ ಮತ್ತೂರ, ಪ್ರಕಾಶ ಜಿ ಶಿಂತ್ರಿ, ಬಸವರಾಜ ಎಫ್ ಪ್ರಜಾರ, ಗವಿಸಿದ್ದಯ್ಯ ಜಿ ಅಮೋಘಿವ್ಮಠ, ಇನಾಯಿತ ಉಲ್ಲಾಖಾನ ಜಹಾಗೀರದಾರ, ಮಾರ್ತಂಡಪ್ಪ ಮೀಶಿಯವರ ಆಯ್ಕೆಯಾಗಿದ್ದಾರೆ.