ಅಕ್ರಮ ಮರಳು ದಂದೆ: ಜಿಲ್ಲಾಧಿಕಾರಿ ದಿಢೀರ್ ಭೇಟಿ

ರಾಣೇಬೆನ್ನೂರ 11-   ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಮರಳು ಸಂಗ್ರಹಿಸುವ ಕೇಂದ್ರವೊಂದಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಕರ್ಾರದ ನಿಯಮ ಮೀರಿ ನದಿಯಿಂದ ಮರಳು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ  ಮರಳು ತುಂಬುವ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ, ಯಂತ್ರಗಳನ್ನು ಬಳಸಿ ನದಿಯಿಂದ ಮರಳನ್ನು ಹೊರ ತೆಗೆಯಬಾರದು, ಈ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಪ್ರಕೃತಿಯ ಸಂಪತ್ತು ರಕ್ಷಿಸಿಸುವುದು ಎಲ್ಲರ ಹೊಣೆಯಾಗಿದೆ ಎಂದರು.

   ಮರಳು ಸಂಗ್ರಹಿಸುವ 3ನೇ ಕೇಂದ್ರದಲ್ಲಿ ಇದ್ದಂತಹ 2 ಜೆಸಿಬಿ, 1 ಇಟಾಚಿ, 1 ಟ್ರ್ಯಾಕ್ಟರ್, ಮೂರು ಸ್ಯಾಂಡ್ ಪಿಲ್ಟರ್ ಮಾಡುವ ಆಯಿಲ್ ಮೆಷಿನ್ಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ವಶಕ್ಕೆ ಪಡೆದರು. ತಹಶೀಲ್ದಾರ್ ಸಿ.ಎಸ್.ಕುಲಕಣರ್ಿ, ಸಿಪಿಐ ಸುರೇಶ್ ಸಗರಿ, ಕಂದಾಯ ನಿರೀಕ್ಷಕ ಎಚ್.ಕೆ.ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ಯುವರಾಜ್ ನಾಯ್ಕ, ಪ್ರಕಾಶ್ ಮತ್ತಿತರರು ಸೇರಿದಂತೆ ಪಾಲ್ಗೊಂಡಿದ್ದರು.